ಮೇಷ
ಮಿಶ್ರ ಫಲದ ದಿನ. ಸಂಭ್ರಮದ ನಡುವೆಯೆ ಮನಸ್ಸು ಕೆಡಿಸುವ ಬೆಳವಣಿಗೆ ಕೂಡಾ ಉಂಟಾದೀತು. ತಾಳ್ಮೆಯ ನಡೆನುಡಿ ಅವಶ್ಯ.
ವೃಷಭ
ಮನದೊಳಗಿನ ಅಸಹನೆ ಹೊರಗೆ ಧುಮುಕಲು ಅವಕಾಶ ಕೊಡಬೇಡಿ. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿ. ಅದೃಷ್ಟ ನಂಬಿ ಕೂರದಿರಿ.
ಮಿಥುನ
ಕೆಲವು ಮುಖ್ಯ ಕೆಲಸ ಇಂದು ಪೂರೈಸುವ ಸಾಧ್ಯತೆ. ಒತ್ತಡದಿಂದ ಬಿಡುವು. ಮನೆಯವರ ಜತೆ ಆರಾಮದಲ್ಲಿ ಕಾಲಕ್ಷೇಪಕ್ಕೆ ಅವಕಾಶ.
ಕಟಕ
ಹಣ ಗಳಿಕೆಯಲ್ಲಿ ಸ-ಲತೆ. ಮನೆಯಲ್ಲಿ ಸಂಭ್ರಮದ ಪರಿಸರ. ಆಪ್ತೇಷ್ಟರೊಡನೆ ಕಾಲಕ್ಷೇಪ. ದೈವಾನುಗ್ರಹ ನಿಮಗಿದೆ, ಉದ್ದೇಶ ಪ್ರಾಪ್ತಿ.
ಸಿಂಹ
ಮನಸ್ಸಿನ ನೆಮ್ಮದಿ ಕೆಡಿಸುವ ಒಂದೆರಡು ಘಟನೆ ಉಂಟಾದೀತು. ಭಾವಾವೇಶದಿಂದ ಪ್ರತಿಕ್ರಿಯಿಸಬೇಡಿ. ಯೋಚಿಸಿ ಹೆಜ್ಜೆಯಿಡಿ.
ಕನ್ಯಾ
ಒತ್ತಡದಿಂದ ವಿರಾಮ ಸಿಗಲಿದೆ. ಆದರೂ ನಿಮ್ಮ ಮನದ ಚಿಂತೆ ಮುಗಿಯದು. ಮನೆಯಲ್ಲಿ ವಾಗ್ವಾದ ನಡೆಸದಿರಿ. ಅವರ ಮಾತಿಗೂ ಬೆಲೆ ಕೊಡಿ.
ತುಲಾ
ಬೇಡವೆಂದರೂ ನಕಾರಾತ್ಮಕ ಚಿಂತನೆ ಆವರಿಸಬಹುದು. ಆಪ್ತರ ಜತೆ ಭಿನ್ನಮತ. ನಿಮ್ಮದೇ ಸರಿಯಿದ್ದರೂ ಸಹಿಸಬೇಕಾದ ಪರಿಸ್ಥಿತಿ.
ವೃಶ್ಚಿಕ
ಪರಿಸ್ಥಿತಿಗೆ ತಕ್ಕಂತೆ ಕ್ಷಿಪ್ರ ಕಾರ್ಯಾಚರಿಸಿ. ಮುಖ್ಯ ವಿಷಯ ನನೆಗುದಿಗೆ ಇಡಬೇಡಿ. ಆರೋಗ್ಯ ಸಮಸ್ಯೆ ಪರಿಹಾರ, ನೆಮ್ಮದಿ.
ಧನು
ಏಕಕಾಲದಲ್ಲಿ ಹಲವಾರು ಹೊಣೆ ನಿಭಾಯಿಸಬೇಕಾದ ಪರಿಸ್ಥಿತಿ. ಸಮರ್ಥವಾಗಿ ನಿರ್ವಹಿಸುವಿರಿ ಎಂಬುದೇ ನಿಮ್ಮ ವಿಶೇಷತೆ.
ಮಕರ
ದಿನವಿಡೀ ಉತ್ಸಾಹ. ಆತ್ಮೀಯರ ಸಂತೋಷದಲ್ಲಿ ನೀವೂ ಭಾಗಿಯಾಗುವಿರಿ. ಸಂಬಂಧ ವೃದ್ಧಿ. ವ್ಯವಹಾರ ಸುಗಮ, ಧನವೃದ್ಧಿ.
ಕುಂಭ
ಬಂಧು ಬಳಗದ ಜತೆ ಕೂಡಿ ಕಳೆಯುವ ಅವಕಾಶ. ವ್ಯವಹಾರದಲ್ಲಿ ಸಂತೃಪ್ತಿ. ಎಲ್ಲವೂ ಇದ್ದೂ ಆಧ್ಯಾತ್ಮಿಕ ಚಿಂತನೆ ನಿಮ್ಮನ್ನು ಕಾಡಬಹುದು.
ಮೀನ
ಏಕಾಗ್ರತೆ ಕೆಡಿಸುವ ಬೆಳವಣಿಗೆ. ಮನದಲ್ಲಿ ಹಲವಾರು ಚಿಂತೆಗಳು. ನೆಗೆಟಿವ್ ಚಿಂತನೆ ಬಿಡಿ, ಉಳಿದವರ ಸಂಭ್ರಮದಲ್ಲಿ ಪಾಲ್ಗೊಳ್ಳಿರಿ.



