March 10, 2026
Tuesday, March 10, 2026
spot_img

ದಿನಭವಿಷ್ಯ: ಖರ್ಚು ಕಡಿಮೆ ಮಾಡ್ಕೊಳಿ ಇಲ್ಲಾಂದ್ರೆ ಕಷ್ಟ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಮೇಷ.
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಗೊಂದಲ ಸೃಷ್ಟಿ. ಅಧಿಕ ಹೊಣೆಗಾರಿಕೆಯ ಭಾರ. ಖರ್ಚು ನಿಯಂತ್ರಿಸುವ ಕಲೆ ಅರಿಯಿರಿ.
ವೃಷಭ
ಹೆಚ್ಚು ಕ್ರಿಯಾಶೀಲ ದಿನ. ಆದರೆ ಪ್ರತಿಫಲ ನಿರೀಕ್ಷೆಗೆ ತಕ್ಕಂತಿರದು. ಆರ್ಥಿಕ ಒತ್ತಡ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ.
ಮಿಥುನ
ವೃತ್ತಿಪರವಾಗಿ, ಪ್ರಾಕ್ಟಿಕಲ್ ಆಗಿ ಕಾರ್ಯ ಎಸಗಿ. ಭಾವುಕತೆ ನಿಮ್ಮ ಸಮಸ್ಯೆ ಪರಿಹರಿಸದು. ಕೌಟುಂಬಿಕ ಬಿಕ್ಕಟ್ಟು. ಕೂಡಿ ಬಾಳಿದರೆ ನೆಮ್ಮದಿ ಎಂದರಿಯಿರಿ.
ಕಟಕ
ವಿಶೇಷ ಘಟಿಸದ ಸಹಜ ದಿನ. ಸಂತೋಷ, ಬೇಸರ ಎರಡನ್ನೂ ಅನುಭವಿಸುವಿರಿ. ಅನಿರೀಕ್ಷಿತ ಧನಲಾಭ. ಕೌಟುಂಬಿಕ ಸಮ್ಮಿಲನ.
ಸಿಂಹ
ನಿಮ್ಮ ಸುತ್ತಲಿನ ಬದಲಾವಣೆಗೆ ಹೊಂದಿಕೊಳ್ಳಿ. ನಿಮ್ಮದೇ ನಿಲುವಿಗೆ ಹಠ ಹಿಡಿಯದಿರಿ. ಹಣದ ಸಮಸ್ಯೆ ಪರಿಹಾರ.
ಕನ್ಯಾ
ವೃತ್ತಿಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆದೀತು. ಪ್ರಗತಿಗೆ ಅಡ್ಡಿ. ಉದ್ಯಮ ಪಾಲುದಾರಿಕೆಗೆ ಒಪ್ಪಿಕೊಳ್ಳದಿರಿ. ಸ್ವಂತ ನಿಲುವು ಸಡಿಲಿಸದಿರಿ.
ತುಲಾ
ನೀವಿಂದು ಏಕಾಗ್ರತೆ ಕಳಕೊಳ್ಳದಿರಿ. ಅಪ್ರಿಯ ಬೆಳವಣಿಗೆಗೆ ಶಾಂತವಾಗಿ ಪ್ರತಿಕ್ರಿಯಿಸಿ. ಎಲ್ಲರನ್ನು ಮೆಚ್ಚಿಸುವ ಪ್ರಯತ್ನ ಬಿಡಿ. ಸಾಂಸಾರಿಕ ನೆಮ್ಮದಿ.
ವೃಶ್ಚಿಕ
ವಸ್ತು ಕಳ್ಳತನ ಆದೀತು. ಎಚ್ಚರ ವಹಿಸಿ. ನಿಮ್ಮ ಅಭಿಲಾಷೆಗೆ ಹೆತ್ತವರ ಸಮ್ಮತಿ ದೊರಕಲಿದೆ. ದೊಡ್ಡ ಚಿಂತೆಯೊಂದು ಪರಿಹಾರ.
ಧನು
ಅತಿ ಭಾವುಕತೆ ಪ್ರದರ್ಶಿಸಬೇಡಿ. ಯಾವುದೇ ಸನ್ನಿವೇಶದಲ್ಲಿ ಶಾಂತವಾಗಿರಿ. ಜಗಳಕ್ಕಿಂತ ರಾಜಿ ಹೊಂದಾಣಿಕೆ ಫಲ ನೀಡಬಲ್ಲುದು.
ಮಕರ
ಸಾಧಾರಣ ಪ್ರಗತಿ. ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಸಂಭವ. ಹಣವನ್ನು ನೀರಿನಂತೆ ಖರ್ಚು ಮಾಡದಿರಿ. ಆತ್ಮೀಯರ ಸಂಗದಲ್ಲಿ ನೆಮ್ಮದಿ.
ಕುಂಭ
ಅತಿಯಾದ ಕೆಲಸದ ಒತ್ತಡ. ಉದ್ವಿಗ್ನತೆ ತರುವ ವಿಚಾರಗಳನ್ನು ಮನದಿಂದ ದೂರವಿಡಿ. ಆತ್ಮೀಯರ ಸಂಗದಲ್ಲಿ ಸಂತೋಷ ಪಡೆಯಲೆತ್ನಿಸಿ.
ಮೀನ
ಫಲಪ್ರದ ದಿನವಲ್ಲ. ಗೊಂದಲ ಕಾಡಲಿದೆ. ಹಣದ ಕೊರತೆ ಸಂಭವ. ಇದರಿಂದ ಖರೀದಿಗೆ ಅಡ್ಡಿ. ಆಪ್ತರಿಂದ ನಿಮ್ಮ ಆಶಯಕ್ಕೆ ಭಂಗ ಬರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !