ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಹಬ್ಬದ ದಿನವಾದ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 2.19 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಪೂರ್ವ ವಲಯದಲ್ಲಿ 44 ಸಾವಿರ, ಪಶ್ಚಿಮ ವಲಯ 60,703, ದಕ್ಷಿಣ ವಲಯ 79,039, ಬೊಮ್ಮನಹಳ್ಳಿ ವಲಯ 7,028, ದಾಸರಹಳ್ಳಿ ವಲಯದಲ್ಲಿ 1,104 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ಮಹದೇವಪುರ ವಲಯದಲ್ಲಿ 5,690, ಆರ್.ಆರ್.ನಗರ ವಲಯದಲ್ಲಿ 13,097 ಮತ್ತು ಯಲಹಂಕ ವಲಯದಲ್ಲಿ 8,492 ಗಣೇಶ ಮೂರ್ತಿಗಳು ಸೇರಿ ನಗರದಲ್ಲಿ 2,19,153 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಇನ್ನು ಯಡಿಯೂರು ಕೆರೆಯ ವಿಸರ್ಜನಾ ಕೊಳದಲ್ಲಿ ಸುಮಾರು 71 ಸಾವಿರಕ್ಕೂ ಹೆಚ್ಚು ಗೌರಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಅವುಗಳ ಪೈಕಿ 66 ಸಾವಿರ ಮಣ್ಣಿನ ಮೂರ್ತಿಗಳು, 3800 ಪೇಪರ್ ಮೂರ್ತಿಗಳು ಮತ್ತು 1200 ಪಿಒಪಿ ಮೂರ್ತಿಗಳಾಗಿವೆ. ಪಿಒಪಿ ಮೂರ್ತಿಗಳ ನಿಷೇಧವಿದ್ದರೂ ಯಡಿಯೂರು ಕೆರೆಯೊಂದಲ್ಲೇ 1,200 ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಇನ್ನುಳಿದ ಪ್ರದೇಶಗಳಲ್ಲೂ ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಆದರೆ, ಬಿಬಿಎಂಪಿ ಅಂಕಿ–ಅಂಶಗಳನ್ನು ನೀಡಿಲ್ಲ.