ಹೊಸದಿಗಂತ ವರದಿ,ವಿಜಯಪುರ:
ಕಬ್ಬು ಬೆಳೆಯ ಮಧ್ಯೆ ಬೆಳೆದಿದ್ದ 6.40 ಲಕ್ಷ ಮೌಲ್ಯದ 15 ಕೆಜಿ 100 ಗ್ರಾಂ ಹಸಿ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿರುವ ಘಟನೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದ್ರಶೇಖರ ಶಿವಪ್ಪ ರಾಮತೀರ್ಥ ಬಂಧಿತ ಆರೋಪಿ.
ಆರೋಪಿ ಚಂದ್ರಶೇಖರ ರಾಮತೀರ್ಥ ತನ್ನ ಜಮೀನಿನ ಕಬ್ಬಿನ ಬೆಳೆ ಮಧ್ಯೆ ಹಸಿ ಗಾಂಜಾ ಗಿಡಗಳನ್ನು ಬೆಳೆದಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಒಟ್ಟು 6.40 ಲಕ್ಷ ಮೌಲ್ಯದ 15 ಕೆಜಿ 100 ಗ್ರಾಮ್ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.

