ನುಗ್ಗೆಕಾಯಿ ಗಿಡವನ್ನು ಆರೋಗ್ಯದ ದೃಷ್ಟಿಯಿಂದಲೂ, ಪರಿಸರದ ದೃಷ್ಟಿಯಿಂದಲೂ ಅತ್ಯಂತ ಉಪಯುಕ್ತ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು “ಡ್ರಮ್‌ಸ್ಟಿಕ್ ಟ್ರೀ” ಅಥವಾ “ಮೋರಿಂಗಾ” ಎಂದೂ ಕರೆಯಲಾಗುತ್ತದೆ. ಮನೆ ಮುಂದೆ ನುಗ್ಗೆಕಾಯಿ ಗಿಡ ಬೆಳೆಸುವುದರಿಂದ ತಾಜಾ ತರಕಾರಿ ಲಭ್ಯವಾಗುವುದಲ್ಲದೆ, ಹಸಿರುಮಯ ವಾತಾವರಣ ನಿರ್ಮಾಣವಾಗುತ್ತದೆ. ಸರಿಯಾದ ವಿಧಾನದಲ್ಲಿ ಬೆಳೆಸಿದರೆ, ನುಗ್ಗೆಕಾಯಿ ಗಿಡವು ಬೇಗನೆ ಬೆಳೆಯುತ್ತದೆ ಹಾಗೂ ವರ್ಷಪೂರ್ತಿ ಫಲ ನೀಡುತ್ತದೆ.

ಬೆಳೆಸುವ ವಿಧಾನ:
ನುಗ್ಗೆಕಾಯಿ ಗಿಡಕ್ಕೆ ಒಣಹವಾಮಾನ ಹಾಗೂ ಬಿಸಿಲು ತುಂಬಾ ಅನುಕೂಲಕರ. ಇದು ಹೆಚ್ಚಿನ ನೀರನ್ನು ಅಗತ್ಯಪಡಿಸುವುದಿಲ್ಲ. ಸಾಮಾನ್ಯ ಮಣ್ಣು, ಕೆಂಪು ಮಣ್ಣು ಅಥವಾ ಮರಳುಮಣ್ಣಿನಲ್ಲಿ ಸಹ ಸುಲಭವಾಗಿ ಬೆಳೆಯುತ್ತದೆ. ಮನೆ ಮುಂದೆ ಖಾಲಿ ಜಾಗವಿದ್ದರೆ, 1.5 ರಿಂದ 2 ಅಡಿ ಆಳದ ಗುಂಡಿಯನ್ನು ಕೊರೆದು ಅದರಲ್ಲಿಗೆ ಕೆಂಪುಮಣ್ಣು, ಗೊಬ್ಬರ ಮತ್ತು ಮರಳು ಮಿಶ್ರಣ ಹಾಕಿ ನುಗ್ಗೆಕಾಯಿ ಬೀಜ ಅಥವಾ ಸಸಿಯನ್ನು ನೆಡಬಹುದು.
ನೀರಾವರಿ:
ನುಗ್ಗೆಕಾಯಿ ಗಿಡಕ್ಕೆ ಅತಿಯಾಗಿ ನೀರು ಹಾಕುವ ಅಗತ್ಯವಿಲ್ಲ. ಪ್ರಾರಂಭದಲ್ಲಿ ವಾರಕ್ಕೆ ಎರಡು ಬಾರಿ ನೀರು ಹಾಕುವುದು ಉತ್ತಮ. ಗಿಡ ಬೇರೂರಿದ ನಂತರ ತಿಂಗಳಿಗೆ 2-3 ಬಾರಿ ನೀರು ಹಾಕಿದರೂ ಸಾಕು. ಹೆಚ್ಚು ನೀರು ಹಾಕಿದರೆ ಬೇರು ಕೊಳೆತುಹೋಗುವ ಸಾಧ್ಯತೆ ಇದೆ.

ಸಮಯಕ್ಕೆ ಗೊಬ್ಬರ:
ಪ್ರತಿ ಮೂರು ತಿಂಗಳಿಗೊಮ್ಮೆ ಹಸುವಿನ ಗೊಬ್ಬರ ಅಥವಾ ಕಂಫೋಸ್ಟ್ ಹಾಕಿದರೆ ಗಿಡದ ಬೆಳವಣಿಗೆ ಉತ್ತಮವಾಗುತ್ತದೆ. ನುಗ್ಗೆ ಎಲೆ, ಹೂ ಹಾಗೂ ಕಾಯಿ ಎಲ್ಲಾ ಪೋಷಕಾಂಶಗಳಿಂದ ತುಂಬಿರುವುದರಿಂದ ಗಿಡ ಸದಾ ಫಲಪ್ರದವಾಗಿರುತ್ತದೆ.
ರೋಗನಿರೋಧಕ ಶಕ್ತಿ:
ನುಗ್ಗೆಕಾಯಿ ಗಿಡ ಹೆಚ್ಚು ಘಾಟು ಇರುವುದರಿಂದ ಸಾಮಾನ್ಯವಾಗಿ ಹೆಚ್ಚು ರೋಗ ಕೀಟಗಳು ಹಾನಿ ಮಾಡುವುದಿಲ್ಲ. ಆದರೂ ಎಲೆಗಳಲ್ಲಿ ಹಳದಿ ಮಚ್ಚೆ ಕಾಣಿಸಿದರೆ ಜೈವಿಕ ಕೀಟನಾಶಕವನ್ನು ಬಳಸಬಹುದು.

ಮನೆಯ ಮುಂದೆ ನುಗ್ಗೆಕಾಯಿ ಗಿಡ ಬೆಳೆಸುವುದರಿಂದ ಆರೋಗ್ಯಕರ ತರಕಾರಿ ಲಭ್ಯವಾಗುವುದಲ್ಲದೆ, ಗಾಳಿಯ ಗುಣಮಟ್ಟ ಸುಧಾರಿಸುತ್ತದೆ. ಗಿಡವನ್ನು ಸರಿಯಾದ ರೀತಿಯಲ್ಲಿ ನೆಟ್ಟು ನೋಡಿಕೊಂಡರೆ, ವರ್ಷಗಳಿಂದ ಫಲ ನೀಡುತ್ತದೆ. ನುಗ್ಗೆಕಾಯಿ ಗಿಡವು ಸುಲಭವಾಗಿ ಬೆಳೆಯುವ ಸಸ್ಯವಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಜಾಗದಲ್ಲಿ ಬೆಳೆಸಬಹುದು.