ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಸೃಷ್ಟಿಯಾಗಿದ್ದ ಗ್ಯಾಸ್ ಸಿಲಿಂಡರ್ ಸಮಸ್ಯೆ ಬಹುತೇಕ ಮುಕ್ತಾಯವಾಗುವ ಸಮಯ ಹತ್ತಿರ ಬಂದಿದೆ. ಬಿಳಿಗಿರಿರಂಗನಬೆಟ್ಟದಲ್ಲಿ ನಿಂತಿದ್ದ ದಾಸೋಹ ಇದೀಗ ಮತ್ತೆ ಆರಂಭವಾಗಿದೆ.
ಗ್ಯಾಸ್ ಸಮಸ್ಯೆಯಿಂದಾಗಿ ಒಂದು ದಿನ ದಾಸೋಹ ನಿಂತಿತ್ತು. ಗ್ಯಾಸ್ ಏಜೆನ್ಸಿಗಳಿಗೆ ಮನವಿ ಮಾಡಿ, ಅವರು ಸ್ಪಂದಿಸಿದ ಕಾರಣ ಮತ್ತೆ ಸಿಲಿಂಡರ್ ಪೂರೈಕೆಯಾಗಿದೆ. ಬಿಳಿಗಿರಿರಂಗನ ಸನ್ನಿಧಿಯಲ್ಲಿ ದಾಸೋಹ ಮತ್ತೆ ಪುನರಾರಂಭಗೊಂಡಿದೆ.
ಇರಾನ್-ಇಸ್ರೇಲ್ ಯುದ್ಧದಿಂದಾಗಿ ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗಿತ್ತು. ಇದೀಗ ನಿಧಾನಕ್ಕೆ ಸಿಲಿಂಡರ್ ಸಮಸ್ಯೆ ಕಡಿಮೆಯಾಗುತ್ತಿದೆ.



