Tuesday, November 18, 2025

ಕಂಚಿನ ಬಾಗಿಲು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಚಾರ ಬಂದ್

ಹೊಸದಿಗಂತ ವರದಿ, ಅಂಕೋಲಾ:

ರಾಸಾಯನಿಕ ಅನಿಲ ತುಂಬಿರುವ ಟ್ಯಾಂಕರ್ ಲಾರಿಯೊಂದು ತಾಲೂಕಿನ ಅಗಸೂರು ನವಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಪಲ್ಟಿಯಾಗಿ ಅನೀಲ ಸೋರಿಕೆ ಆಗುತ್ತಿರುವುದರಿಂದ ಘಟನಾ ಸ್ಥಳದಲ್ಲಿ ಜನ ಮತ್ತು ವಾಹನಗಳ ಸಂಚಾರಕ್ಕೆ ನೀಷೇದ ಹೇರಲಾಗಿದ್ದು, ಅಂಕೋಲಾ ಯಲ್ಲಾಪುರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗಗಳ ಬಳಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿದ್ದು ಚಾಲಕ ಗಾಯಗೊಂಡಿದ್ಥು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿಥೆನಾಲ್ ಅಮೈನ್ ಬ್ರೋಮೈಡ್ ರಾಸಾಯನಿಕ ಅನಿಲ ತುಂಬಿ ಗುಜರಾತ್ ನಿಂದ ಮಂಗಳೂರು ಕಡೆ ತೆರಳುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ್ದು ಅನೀಲ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ಕಾರಣ ಅಂಕೋಲಾ ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ, ಪಿ.ಎಸ್ ಐ ಗುರುನಾಥ ಹಾದಿಮನಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಯಾವುದೇ ರೀತಿಯ ಅನಾಹುತಕ್ಕೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಸಂಬಂಧಿಸಿದ ತಾಂತ್ರಿಕ ಪರಿಣಿತರು ಆಗಮಸಿದ ನಂತರ ಟ್ಯಾಂಕರ್ ಮೇಲೆತ್ತುವ ಕೆಲಸ ನಡೆಯಲಿದೆ.

ವಾಹನಗಳ ಸಂಚಾರಕ್ಕೆ ಹೊಸಕಂಬಿ ಹಿಲ್ಲೂರು ರಾಜ್ಯ ಹೆದ್ದಾರಿ ಮತ್ತು ಅಗಸೂರು ಕೊಡಸಣಿ ಮಾರ್ಗವಾಗಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

error: Content is protected !!