ಹೊಸದಿಗಂತ ಮಂಗಳೂರು:
ನಗರದ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ (Indian wolf) ಗೀತಾ ಒಟ್ಟು ಏಳು ಮರಿಗಳಿಗೆ ಜನ್ಮನೀಡಿದೆ. ಈ ಪೈಕಿ ನಾಲ್ಕು ಗಂಡು ಮತ್ತು ಮೂರು ಹೆಣ್ಣು.
ಕಳೆದ ಮುರು ವರ್ಷಗಳಿಂದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳಗಳನ್ನು ಬೆಳೆಸಲಾಗುತ್ತಿದೆ. ಈ ಭಾರತೀಯ ತೋಳಗಳ ಮೊದಲ ಯಶಸ್ವಿ ಸಂತಾನೋತ್ಪತ್ತಿ ಇದಾಗಿದ್ದು, ಉದ್ಯಾನವನದ ಸಂರಕ್ಷಣೆ ಮತ್ತು ಸೆರೆಹಿಡಿಯಲಾದ ಸಂತಾನೋತ್ಪತ್ತಿ ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗಿದೆ.
ತಾಯಿ ತೋಳ ಮತ್ತು ಎಲ್ಲಾ ಏಳು ಮರಿಗಳು ಆರೋಗ್ಯವಾಗಿವೆ. ಪಶುವೈದ್ಯರು ಮತ್ತು ಪ್ರಾಣಿ ಪಾಲಕರು ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಮರಿಗಳು ಈಗ ಆರೋಗ್ಯವಾಗಿ ಓಡಾಡುತ್ತಿದ್ದು, ಅವುಗಳನ್ನು ಸಂದರ್ಶಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.



