April 8, 2026
Wednesday, April 8, 2026
spot_img

ಗಿಲ್, ಬಟ್ಲರ್, ಸುಂದರ್ ಭರ್ಜರಿ ಬ್ಯಾಟಿಂಗ್: ಡೆಲ್ಲಿ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಗುಜರಾತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಯಕ ಶುಭ್​ಮನ್ ಗಿಲ್ ,ಬಟ್ಲರ್ ಹಾಗೂ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಟೈಟನ್ಸ್ ಪರ ಸಾಯಿ ಸುದರ್ಶನ್ 12 ರನ್ ಗಳಿಸಿ ವಿಕೆಟ್ ನೀಡಿದರು. ಬಳಿಕ ಜೊತೆಯಾದ ಬಟ್ಲರ್, ಗಿಲ್ ತಂಡದ ರನ್ ಹೆಚ್ಚಿಸಿದರು.
ಬಟ್ಲರ್ 52 ರನ್​ಗಳಿಸಿ ಬೌಲ್ಡ್ ಆದರು.

ಬಳಿಕ ಸುಂದರ್, ನಾಯಕ ಗಿಲ್ ಜೊತೆಗೂಡಿ104 ರನ್​ಗಳ ಜೊತೆಯಾಟ ನೀಡಿದರು. ಗಿಲ್ ೭೦ ರನ್ ಗೆ ಕ್ಯಾಚ್ ನೀಡಿ ಔಟ್ ಆದರು. ಸುಂದರ್ 55 ರನ್​ಗಳಿಸಿ ಕೊನೆಯ ಓವರ್‌ನಲ್ಲಿ ಮುಖೇಶ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಫಿಲಿಪ್ಸ್ ಅಜೇಯ 14, ತೆವಾಟಿಯಾ ಅಜೇಯ 1 ರನ್​ಗಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !