April 13, 2026
Monday, April 13, 2026
spot_img

ಗಿಲ್​-ಬಟ್ಲರ್ ಭರ್ಜರಿ ಜೊತೆಯಾಟ: ಲಖನೌ ವಿರುದ್ಧ ಗುಜರಾತ್ ಗೆ ಗೆಲುವಿನ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಗಿಲ್​-ಬಟ್ಲರ್ ಭರ್ಜರಿ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ 164 ರನ್ ಮಾತ್ರ ಗಳಿಸಿತ್ತು . ಈ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ಗೆ ಆರಂಭದಲ್ಲಿ ಸಾಯಿ ಸುದರ್ಶನ್ ನಿರಾಸೆ ಮೂಡಿಸಿದರು. ಬಳಿಕ ನಾಯಕ ಶುಭಮನ್ ಗಿಲ್ , ಜೋಸ್ ಬಟ್ಲರ್ ಭರ್ಜರಿ ಜೊತೆಯಾಟ ತಂಡವನ್ನು ಗೆಲುವಿನ ದಡದತ್ತ ಕರೆದ್ಯೋಯಿದರು. ಈ ವೇಳೆ ಗಿಲ್ 56 ಗಳಿಸಿ ಔಟಾದರೆ, ಜೋಸ್ ಬಟ್ಲರ್ 60 ರನ್ ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು.

ಬಳಿಕ ಬಂದ ವಾಷಿಂಗ್ಟನ್ ಸುಂದರ್, ಹಾಗೂ ರಾಹುಲ್ ತೆವಾಟಿಯಾ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !