ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಿ ಪರಚಿದ್ದರೂ ಲಸಿಕೆ ಪಡೆಯದ ಬಾಲಕಿಯೊಬ್ಬಳು ರೇಬೀಸ್ನಿಂದ ಮೃತಪಟ್ಟಿದ್ದಾಳೆ. ಮುಂಬೈನಲ್ಲಿ ನೆಲೆಸಿರುವ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಶಿಕ್ ಸಹಾನಿ ಮೃತ ಬಾಲಕಿ.
ಆರು ತಿಂಗಳ ಹಿಂದೆ ಅಜ್ಜನ ಜತೆ ನಡೆದುಕೊಂಡು ಹೋಗುವಾಗ ಆಕೆಯ ಮೇಲೆ ಬೀದಿನಾಯಿ ದಾಳಿ ಮಾಡಿತ್ತು. ಕೈ ಕಾಲಿಗೆ ಪರಚಿತ್ತು. ತಕ್ಷಣ ಅಜ್ಜ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ರೇಬೀಸ್ ಲಸಿಕೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಸಹಾನಿ ಇದಕ್ಕೆ ಒಪ್ಪದೇ ಹಠ ಮಾಡಿದ್ದಾಳೆ.
ಇದಾಗಿ ಕೆಲವೇ ದಿನಕ್ಕೆ ಆಕೆ ಚೇತರಿಸಿಕೊಂಡಿದ್ದು, ಮನೆಯವರು ಕೂಡ ನಾಯಿ ಪರಚಿದ್ದನ್ನು ಗಾಯದಂತೆ ಟ್ರೀಟ್ ಮಾಡಿದ್ದರು. ಆದರೆ ಆರು ತಿಂಗಳ ನಂತರ ಸಹಾನಿ ಆರೋಗ್ಯ ಹಾಳಾಗಿದೆ. ಊಟ, ನೀರನ್ನು ಆಕೆ ನಿಲ್ಲಿಸಿದ್ದಳು. ಕಣ್ಣು ಕೆಂಪಾಗಿತ್ತು.
ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಯಾರೇ ಆಗಲಿ ನಾಯಿ, ಬೆಕ್ಕಿನಿಂದ ಆದ ಗಾಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.



