Tuesday, December 23, 2025

ಈ ಹಳ್ಳಿಯ ಹೆಣ್ಮಕ್ಕಳಿಗೆ ಕ್ಯಾಮೆರಾ ಇರುವ ಫೋನ್‌ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಸ್ಥಾನದ ಜಲೋರ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಜನವರಿ 26 ರಿಂದ 15 ಹಳ್ಳಿಗಳ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಹೊಂದಿರುವ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಿದೆ.

ಅಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೂ ಕೂಡಾ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಬದಲಾಗಿ, ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಫೋನ್‌ ಮಾತ್ರ ಬಳಸಲು ಅನುಮತಿ ನೀಡಲಾಗಿದೆ.

ಜಲೋರ್ ಜಿಲ್ಲೆಯ ಗಾಜಿಪುರ ಗ್ರಾಮದ 14 ಪತ್ತಿನ (ಉಪವಿಭಾಗ) ಅಧ್ಯಕ್ಷ ಸುಜ್ಞಾರಾಂ ಚೌಧರಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಟಿಐ ಜೊತೆ ಮಾತನಾಡಿದ ಚೌಧರಿ, ಐವರು ಸಮುದಾಯದ ಸದಸ್ಯರು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಸೊಸೆಯಂದಿರು ಮತ್ತು ಯುವತಿಯರು ಕರೆಗಾಗಿ ಕೀಪ್ಯಾಡ್ ಫೋನ್‌ಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಗೆ ಹೋಗುವ ಹುಡುಗಿಯರು ತಮ್ಮ ವ್ಯಾಸಂಗಕ್ಕೆ ಮೊಬೈಲ್ ಫೋನ್‌ಗಳ ಅಗತ್ಯವಿರುವಾಗ ಅದನ್ನು ಮನೆಯಲ್ಲಿ ಮಾತ್ರ ಬಳಸಬಹುದು. ಮದುವೆ, ಸಾಮಾಜಿಕ ಕಾರ್ಯಕ್ರಮಗಳು ಅಥವಾ ನೆರೆಹೊರೆಯವರ ಮನೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವರಿಗೆ ಅನುಮತಿ ಇಲ್ಲ ಎಂದು ಚೌಧರಿ ವಿವರಿಸಿದರು.

error: Content is protected !!