Sunday, December 28, 2025

Mental Health | ಅಮ್ಮನ ಮಾನಸಿಕ ಆರೋಗ್ಯಕ್ಕೂ ಸ್ವಲ್ಪ ಇಂಪಾರ್ಟೆನ್ಸ್ ಕೊಡಿ: ಆಕೆಯ ಆರೈಕೆ ಹೇಗಿರಬೇಕು?

ಮನೆ ಎನ್ನುವ ಪದಕ್ಕೆ ಜೀವ ತುಂಬುವವರು ತಾಯಂದಿರು. ಕುಟುಂಬದ ಪ್ರತಿಯೊಬ್ಬರ ಅಗತ್ಯ, ಭವಿಷ್ಯ, ಭದ್ರತೆ ಬಗ್ಗೆ ಯೋಚಿಸುತ್ತಾ ದಿನವಿಡೀ ಜವಾಬ್ದಾರಿಗಳ ನಡುವೆ ಬದುಕು ಸಾಗಿಸುವ ತಾಯಂದಿರು ಇಂದು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಕೆಲಸದ ಸ್ಥಳ, ಸಮಾಜ, ಕುಟುಂಬ ಎಲ್ಲೆಡೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಈ ಎಲ್ಲದ ನಡುವೆಯೇ ಅವರ ಮನಸ್ಸಿನಲ್ಲಿ ಒತ್ತಡ, ಚಿಂತೆ, ತೋರ್ಪಡಿಸಿಕೊಳ್ಳಲಾಗದ ಭಾವನೆಗಳು ಮೌನವಾಗಿ ಜಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ, ತಾಯಂದಿರ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದು ಅತ್ಯಂತ ಅಗತ್ಯ.

  • ಅವರ ಕೆಲಸವನ್ನು ಅರ್ಥಮಾಡಿಕೊಳ್ಳಿ: ತಾಯಿ ಗೃಹಿಣಿಯಾಗಿರಲಿ ಅಥವಾ ಉದ್ಯೋಗದಲ್ಲಿರಲಿ, ಅವರ ದುಡಿಮೆ ಮೌಲ್ಯಯುತ. ಅವರ ಕೆಲಸದ ಒತ್ತಡವನ್ನು ಮನಸ್ಸಿನಿಂದ ಅರ್ಥಮಾಡಿಕೊಂಡಾಗಲೇ ಅವರಿಗೆ ನೆಮ್ಮದಿ ಸಿಗುತ್ತದೆ.
  • ಮನೆ ಕೆಲಸದಲ್ಲಿ ಕೈಜೋಡಿಸಿ: ಮನೆಯ ಜವಾಬ್ದಾರಿ ತಾಯಿಯೊಬ್ಬರ ಮೇಲೇ ಇರಬಾರದು. ನಿಮ್ಮ ಸಣ್ಣ ಸಹಾಯವೂ ಅವರ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ಸಂತೋಷ ನೀಡುತ್ತದೆ.
  • ದೈಹಿಕ ಆರೈಕೆಗೆ ಗಮನ ಕೊಡಿ: ಸರಿಯಾದ ನಿದ್ರೆ, ಸಮಯಕ್ಕೆ ಆಹಾರ, ಆರೋಗ್ಯ ತಪಾಸಣೆ ಇವೆಲ್ಲವೂ ಅವರ ಮಾನಸಿಕ ಸಮತೋಲನಕ್ಕೆ ಅಗತ್ಯ.
  • ದೈಹಿಕ ಚಟುವಟಿಕೆ ಪ್ರೋತ್ಸಾಹಿಸಿ: ವಾಕ್, ಯೋಗ, ವ್ಯಾಯಾಮ ಹೀಗೆ ಲಘು ಚಟುವಟಿಕೆಗಳು ಮನಸ್ಸನ್ನು ಹಗುರಗೊಳಿಸುತ್ತವೆ.

ಮಾತಿಗೆ ಸಮಯ ಕೊಡಿ: ತಾಯಿಯ ಮಾತುಗಳನ್ನು ಶಾಂತವಾಗಿ ಕೇಳುವುದು ಅವರ ಮನಸ್ಸಿನ ಭಾರ ಕಡಿಮೆ ಮಾಡುತ್ತದೆ. ತಾಯಿ ಆರೋಗ್ಯವಾಗಿದ್ದರೆ ಮನೆ ಆರೋಗ್ಯವಾಗಿರುತ್ತದೆ. ಅವರ ಮನಸ್ಸಿನ ಕಾಳಜಿ ವಹಿಸುವುದು ಮಕ್ಕಳಾಗಿ ನಮ್ಮ ದೊಡ್ಡ ಜವಾಬ್ದಾರಿಯಾಗಿದೆ.

error: Content is protected !!