Wednesday, December 10, 2025

ಗೋವಾ ಭೀಕರ ಅಗ್ನಿ ದುರಂತ: ನೈಟ್‌ಕ್ಲಬ್ ಕಟ್ಟಡ ನೆಲಸಮಗೊಳಿಸಲು ಆದೇಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗೋವಾದಲ್ಲಿ ಭೀಕರ ಅಗ್ನಿ ದುರಂತದಲ್ಲಿ 25 ಜನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಟ್‌ಕ್ಲಬ್ ಬೆಂಕಿ ಅವಘಡಕ್ಕೆಸಂಬಂಧಿಸಿದಂತೆ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ಮಾಲೀಕರಾದ ಸೌರವ್ ಲುಥ್ರಾ ಮತ್ತು ಗೌರವ್ ಲುಥ್ರಾ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಿದೆ. ಜೊತೆಗೆ ಲುಥ್ರಾ ಸಹೋದರರ ನೈಟ್​ಕ್ಲಬ್ ನೆಲಸಮಗೊಳಿಸಲು ಸರ್ಕಾರ ಆದೇಶಿಸಿದೆ.

ಡಿಸೆಂಬರ್ 7ರ ಬೆಳಿಗ್ಗೆ ಲುಥ್ರಾ ಸಹೋದರರು ದೇಶವನ್ನು ತೊರೆದು ಫುಕೆಟ್‌ಗೆ ವಿಮಾನದಲ್ಲಿ ಪರಾರಿಯಾಗಿದ್ದರು.

ಪೊಲೀಸರ ಹೇಳಿಕೆಯ ಪ್ರಕಾರ, ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರು ಡಿಸೆಂಬರ್ 7ರಂದು ಬೆಳಿಗ್ಗೆ 5.30ಕ್ಕೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಫುಕೆಟ್‌ಗೆ ಪಲಾಯನ ಮಾಡಿದರು.

ಗೋವಾ ನೈಟ್‌ಕ್ಲಬ್ ಬೆಂಕಿ ಅವಘಡದ ತನಿಖೆಯ ಭಾಗವಾಗಿ, ಪೊಲೀಸರು ಅವರ ವಿರುದ್ಧ ಲುಕ್‌ಔಟ್ ನೊಟೀಸ್ ಅನ್ನು ಸಹ ಹೊರಡಿಸಿದ್ದಾರೆ. ಈ ನೊಟೀಸ್ ದೆಹಲಿಯ ಜಿಟಿಬಿ ನಗರದಲ್ಲಿರುವ ಅವರ ನಿವಾಸವನ್ನು ತಲುಪಿದೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು. ಈ ಮಧ್ಯೆ ಗೋವಾ ಪೊಲೀಸರು ಲುಥ್ರಾ ಸಹೋದರರು ಮತ್ತು ಅವರ ಸಹಚರರನ್ನು ಪತ್ತೆಹಚ್ಚಲು ದೆಹಲಿಯಲ್ಲಿ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯದ ಲುಥ್ರಾ ಸಹೋದರರ ಮುಖ್ಯ ಕ್ಲಬ್ ಆದ ರೋಮಿಯೋ ಲೇನ್ ವಾಗೇಟರ್ ಅನ್ನು ಕೆಡವಲು ಆದೇಶ ನೀಡಿದ್ದಾರೆ. ಸುರಕ್ಷತಾ ಉಲ್ಲಂಘನೆಗಳು ಮತ್ತು ಕ್ಲಬ್ ಅಗ್ನಿಶಾಮಕ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂಬ ಆರೋಪದ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

error: Content is protected !!