ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡೂವರೆ ವರ್ಷ ಮುಂದುವರಿಯಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಶಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಲೆ ಬಳ್ಳಾರಿ ಗಲಾಟೆ ಪ್ರಕರಣ ವಿಷಯ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು. ರಾಜ್ಯದ ಕಾನೂನನ್ನು ನೀವು ಕಾಪಾಡಿ. ವಿಶೇಷವಾಗಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಒಳ್ಳೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.
ಬಳ್ಳಾರಿಯಲ್ಲಿ ಅಂದು ಎಲ್ಲರೂ ಮದ್ಯ ಕುಡಿದು ಬಂದಿದ್ದರು. ನೆರೆದಿದ್ದ ಜನ ಕಲ್ಲು ಹೊಡೆದರೆ. ಅಂಗರಕ್ಷಕರು ಗುಂಡು ಹಾರಿಸಿದರು. ಅದೆಲ್ಲವೂ ನಮ್ಮ ಮನೆಗೆ ಬಂದು ಹೊಡೆದಿದೆ. ಈ ಘಟನೆ ಸಂಬಂಧ ಫಾರೆನ್ಸಿಕ್ ಲ್ಯಾಬ್‌ನವರು ಬಂದು ಸಾಕ್ಷ್ಯ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ನಮ್ಮ ಮನೆಗೆ SP ಮತ್ತು IG ಬಂದರು. ಜನಾರ್ದನ ರೆಡ್ಡಿ ಅವರೇ ನೀವು ಹೆದರಬೇಡಿ ಅಂದರು. ಅವರಿಗೆ ಈಗಾಗಲೇ ವರದಿ ಬಂದಿರಬಹದು. ಎಸ್ಪಿ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ನಮ್ಮ ಮನೆ ಮೇಲೆ ಕಲ್ಲು ತೂರುತ್ತಿದ್ದರು. ಈ ವೇಳೆ ಪೊಲೀಸರು ಲಾಟಿ ಚಾರ್ಜ್ ಮಾಡುತ್ತಿದ್ದರು. ಈ ವೇಳೆ ವಾಪಸ್ ಓಡುವಾಗ ಗನ್ ಪಾಯಿಂಟ್‌ಗೆ ಸಿಕ್ಕಿ ಕಾರ್ಯಕರ್ತ ಡೆತ್ ಆಗಿದ್ದಾನೆ ಎಂದು ವಿವರಿಸಿದರು.
ಎಂಎಲ್‌ಎ ಅಲ್ಲೇ ಇದ್ದ, ನನ್ನ ಮನೆ ಮುಂದೆಯೇ ಕಾರ್ಯಕರ್ತ ಅಸು ನೀಗಿದ್ದ. ಕಾರ್ಯಕರ್ತನ ಸಾವಿಗೆ ನಾವು ಕಾರಣ ಅಂತ ಮನೆ ಮುಂದೆ ಪ್ರತಿಭಟನೆ ಮಾಡಿದರು. ಜನಾರ್ದನ ರೆಡ್ಡಿ ಮನೆ ಮೇಲೆ ಸಾವಿರಾರು ಜನ ದಾಳಿ ಮಾಡಿದ್ದಾರೆ ಅಂತ ಎಸ್ಪಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಪೊಲೀಸರು ಕರ್ತವ್ಯ ಮಾಡಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಐ ಸ್ಟಾಂಡ್ ವಿತ್ ಅವರ್ ಎಂಎಲ್‌ಎ ಅಂತ ಹೇಳಿದ್ದಾರೆ. ಅವರು ಅವರ ಎಂಎಲ್‌ಎ ಅವರ ಪರವಾಗಿ ನಿಲ್ಲಲಿ. ಆದರೆ ಎಂಥವರ ಪರ ನಿಲ್ಲಬೇಕು? ನಾನೂ ಬಳ್ಳಾರಿಯಲ್ಲಿ ರಾಜಕಾರಣ ಮಾಡಿದ್ದೇನೆ. ಆದರೆ ನಿಮ್ಮ ಹುದ್ದೆಗೆ ನೀವು ಗೌರವ ಕೊಟ್ಟಿಲ್ಲ ಎಂದು ದೂರಿದರು.



