ಹೊಸದಿಗಂತ ವರದಿ ಹಾವೇರಿ :
ನಗರದ ಹೃದಯ ಭಾಗ ದೇಸಾಯಿಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳ್ಳತನವಾಗಿದ್ದು, ರಾಘವೇಂದ್ರ ಮಠದ ಎರಡು ಕೊಣೆಯ ಬೀಗ ಮುರಿದು ಕೋಣೆಯಲ್ಲಿ ಇಟ್ಟಿದ್ದ ಒಟ್ಟು 10,67,668 ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಗ್ರಿಗಳು, ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ದೀಪಾವಳಿ ನರಕ ಚತುರ್ಧಶಿ ದಿನದಂದು ರಾತ್ರಿ 8-30ರಿಂದ 21ರ ಬೆಳಗಿನ 11.30ರ ಅವಧಿಯಲ್ಲಿ ರಾಘವೇಂದ್ರಮಠದ ಎರಡು ಕೊಣೆಯ ಬೀಗವನ್ನು ಆಯುಧದಿಂದ ಮುರಿದು ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಹಾಗೂ ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.
ಕಳುವಾದ ವಸ್ತುಗಳು:
15 ಗ್ರಾಂ ತೂಕದ 1.79 ಲಕ್ಷ ರೂ. ಮೌಲ್ಯದ ಚಿನ್ನದ ಸರದ ಹುಕ್ಕು, 18 ಗ್ರಾಂ ತೂಕದ 2.15 ಲಕ್ಷ ರೂ. ಮೌಲ್ಯದ ಚಿನ್ನದ ಸರದ ಹುಕ್ಕು, 6 ಗ್ರಾಂ ತೂಕದ 71 ಸಾವಿರ ಮೌಲ್ಯದ ಸಣ್ಣ ಪುಷ್ಪ ಎಲೆ, 2 ಬೆಳ್ಳಿಯ ತಂಬಿಗೆ, 6 ಬೆಳ್ಳಿಯ ಲೋಟ, ಬೆಳ್ಳಿಯ ಉದ್ದರಣಿ, 2 ಬೆಳ್ಳಿಯ ತಟ್ಟೆಗಳು, 1 ಬೆಳ್ಳಿಯ ಆರತಿ ಇವುಗಳ ಒಟ್ಟು ಮೌಲ್ಯ ಅಂದಾಜು 2.70ಲಕ್ಷ ರೂ., 75 ಕೆ.ಜಿ ತೂಕದ ರಥದ ಮೇಲಿನ ಹಿತ್ತಾಳೆಯ 3 ಕಳಸ ಅಂದಾಜು 1 ಲಕ್ಷ ರೂ., 60ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು ಅಂದಾಜು ಮೌಲ್ಯ 42 ಸಾವಿರ, 18 ಕೇಜಿ ತೂಕದ ತಾಮ್ರದ 50 ತಂಬಿಗೆಗಳು, 247 ಕೆ.ಜಿ ಹಿತ್ತಾಳೆಯ ದೀಪ ಮತ್ತು ಗಂಟೆಗಳು ಹೀಗೆ ಒಟ್ಟು 10,67,668 ರೂ. ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿವೆ ಎಂದು ದೇವಸ್ಥಾನ ಟ್ರಸ್ಟ್ ನ ಡಾ.ವೀಣಾ ಎಸ್, ಶ್ರೀನಿವಾಸ ವೈದ್ಯ ಇವರು ದೂರು ನೀಡಿದ್ದಾರೆ.
ಈ ಬಗ್ಗೆ ಹಾವೇರಿ ಶಹರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

