March 7, 2026
Saturday, March 7, 2026
spot_img

ಮತ್ತೆ ಹೆಚ್ಚಾಯ್ತು ಬಂಗಾರದ ಬೆಲೆ: ಬೆಳ್ಳಿಯಲ್ಲಿ ಸ್ವಲ್ಪ ಇಳಿಕೆ! ಇವತ್ತಿನ ದರಪಟ್ಟಿ ಹೀಗಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವಾರ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದ ನಂತರ ವಾರಾಂತ್ಯದ ವೇಳೆಗೆ ಚಿನ್ನದ ದರದಲ್ಲಿ ಸ್ವಲ್ಪ ಹೆಚ್ಚಳ ದಾಖಲಾಗಿದೆ. ಕಳೆದ ಕೆಲ ದಿನಗಳಿಗಿಂತ ಗ್ರಾಮ್‌ಗೆ ಸುಮಾರು 180 ರಿಂದ 200 ರೂವರೆಗೆ ದರ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ಇದರ ಮೇಲೆ ಪರಿಣಾಮ ಬೀರಿವೆ. ಕೆಲ ದೇಶಗಳಲ್ಲಿ ದರ ಏರಿದರೆ, ಇನ್ನೂ ಕೆಲವು ಕಡೆ ಇಳಿಕೆಯ ಲಕ್ಷಣಗಳು ಕಾಣಿಸಿಕೊಂಡಿವೆ.

ಭಾರತದಲ್ಲಿ ಈಗ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,44,600 ರೂ ಆಗಿದೆ. 24 ಕ್ಯಾರಟ್ ಚಿನ್ನದ ದರ 10 ಗ್ರಾಮ್‌ಗೆ 1,57,750 ರೂ ತಲುಪಿದೆ. ಅದೇ ಸಮಯದಲ್ಲಿ ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡುಬಂದಿದ್ದು, ಕೆಲವು ಕಡೆ ಗ್ರಾಮ್‌ಗೆ 5 ರೂವರೆಗೆ ಕಡಿಮೆಯಾಗಿದೆ. ಸದ್ಯ 100 ಗ್ರಾಮ್ ಬೆಳ್ಳಿಯ ದರ ಸುಮಾರು 27,500 ರೂ ಇದೆ.

ಇದನ್ನೂ ಓದಿ:

ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ಹೆಚ್ಚಿನ ನಗರಗಳಲ್ಲಿ ದರಗಳಲ್ಲಿ ಹೆಚ್ಚು ವ್ಯತ್ಯಾಸ ಕಾಣಿಸಿಲ್ಲ. ಕೆಲವು ರಾಜ್ಯಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ವಿದೇಶಗಳಲ್ಲೂ ಚಿನ್ನದ ದರಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆಗಳು ಮುಂದುವರಿದಿವೆ. ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿಗಳ ಪ್ರಭಾವದಿಂದ ಮುಂದಿನ ದಿನಗಳಲ್ಲಿ ದರಗಳಲ್ಲಿ ಮತ್ತಷ್ಟು ಏರಿಳಿತ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !