April 6, 2026
Monday, April 6, 2026
spot_img

Gold Rate | ಚಿನ್ನ-ಬೆಳ್ಳಿ ಓಟಕ್ಕೆ ಬ್ರೇಕ್: ವಾರಾಂತ್ಯದಲ್ಲಿ ತಣ್ಣಗಾದ ಹಳದಿ ಲೋಹದ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ವಾರಾಂತ್ಯದ ವೇಳೆಗೆ ಸ್ಥಿರತೆಯನ್ನು ಕಂಡುಕೊಂಡಿವೆ. ಈ ವಾರದ ಒಟ್ಟಾರೆ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ ಗ್ರಾಮ್‌ಗೆ 260 ರೂಪಾಯಿಗಳಷ್ಟು ಏರಿಕೆ ಕಂಡಿರುವುದು ಗಮನಾರ್ಹ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಸದ್ಯಕ್ಕೆ ಯಥಾಸ್ಥಿತಿಯಲ್ಲಿವೆ.

ಇಂದಿನ ಮಾರುಕಟ್ಟೆ ದರಗಳು:

22 ಕ್ಯಾರೆಟ್ ಚಿನ್ನ (10 ಗ್ರಾಮ್): 1,38,350 ರೂಪಾಯಿ.

24 ಕ್ಯಾರೆಟ್ ಅಪರಂಜಿ ಚಿನ್ನ (10 ಗ್ರಾಮ್): 1,50,930 ರೂಪಾಯಿ.

ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೂ, ಬೆಳ್ಳಿಯ ಬೆಲೆಯಲ್ಲಿ ಯಾವುದೇ ಮಹತ್ತರ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 25,000 ರೂಪಾಯಿಗಳಷ್ಟಿದೆ. ಆದರೆ, ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ ಸ್ವಲ್ಪ ಹೆಚ್ಚಿದ್ದು, ಪ್ರತಿ 100 ಗ್ರಾಮ್‌ಗೆ 25,500 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !