ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಗಗನಕ್ಕೇರಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಅಲ್ಪ ಸಮಾಧಾನ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರೂ, ಭಾರತದಲ್ಲಿ ಮಾತ್ರ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 45 ರೂಪಾಯಿ ಕಡಿತವಾಗಿದ್ದರೆ, ಬೆಳ್ಳಿ ಬೆಲೆಯೂ ಪ್ರತಿ ಗ್ರಾಂಗೆ 5 ರೂಪಾಯಿಗಳಷ್ಟು ಅಲ್ಪ ಇಳಿಕೆ ಕಂಡಿದೆ.
ಇಂದಿನ ದರ ವಿವರಗಳು:
22 ಕ್ಯಾರಟ್ ಚಿನ್ನ (10 ಗ್ರಾಂ): 1,41,450 ರೂಪಾಯಿ.
24 ಕ್ಯಾರಟ್ ಚಿನ್ನ (10 ಗ್ರಾಂ): 1,54,310 ರೂಪಾಯಿ.
ಬೆಳ್ಳಿ ಬೆಲೆ (100 ಗ್ರಾಂ): 32,500 ರೂಪಾಯಿ.
ಬೆಂಗಳೂರಿನಲ್ಲಿ ಚಿನ್ನದ ದರ 1,41,450 ರೂಪಾಯಿ (10 ಗ್ರಾಂ) ಹಾಗೂ ಬೆಳ್ಳಿ ಬೆಲೆ 32,500 ರೂಪಾಯಿ (100 ಗ್ರಾಂ) ದಾಖಲಾಗಿದೆ. ಆದರೆ ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ ಬೆಂಗಳೂರಿಗಿಂತ ತುಸು ಹೆಚ್ಚಿದ್ದು, 34,000 ರೂಪಾಯಿ ಆಸುಪಾಸಿನಲ್ಲಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ದರ ಏರುಗತಿಯಲ್ಲಿದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿನ ಈ ಇಳಿಕೆ ಹೂಡಿಕೆದಾರರು ಮತ್ತು ಗ್ರಾಹಕರಿಗೆ ಖರೀದಿಗೆ ಉತ್ತಮ ಅವಕಾಶ ನೀಡಿದೆ.


