Friday, November 21, 2025

ಗೋಲ್ಡ್ ರೇಟ್ ಗೇಮ್: ಚಿನ್ನ ಅಗ್ಗವಾದರೂ, ಬೆಳ್ಳಿ ದರ ಏರಿಕೆ, ಇಂದಿನ ನಿಖರ ಬೆಲೆ ಇಲ್ಲಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರುವಾರದಂದು ಚಿನ್ನದ ಬೆಲೆ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಗ್ರಾಮ್‌ಗೆ 55 ರೂ. ಕಡಿಮೆಯಾಗಿದೆ. ಈ ಕುಸಿತದಿಂದಾಗಿ ಆಭರಣ ಚಿನ್ನದ ಬೆಲೆಯು 11,400 ರೂಪಾಯಿ ಗಡಿಯಿಂದ ಕೆಳಗೆ ಇಳಿದಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು:

22 ಕ್ಯಾರಟ್ ಚಿನ್ನ (10 ಗ್ರಾಂ): 1,13,900

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,24,260

ಬೆಳ್ಳಿ (100 ಗ್ರಾಂ): 16,500

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿದೆ. ಅದೇ ರೀತಿ, ಬೆಳ್ಳಿ ಬೆಲೆಯು ತನ್ನ ಏರಿಳಿತದ ಆಟವನ್ನು ಮುಂದುವರಿಸಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲವೆಡೆ 100 ಗ್ರಾಂ ಬೆಳ್ಳಿ ದರ 17,300ಕ್ಕೆ ತಲುಪಿದೆ.

error: Content is protected !!