ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಹೂಡಿಕೆದಾರರಿಗೆ ಮಾರುಕಟ್ಟೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಮಾರ್ಚ್ ತಿಂಗಳ ಆರಂಭದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯ ಟ್ರೆಂಡ್ ಕಂಡುಬರುತ್ತಿದ್ದು, ಕಳೆದ ಮೂರು ವಾರಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯ ಮೇಲೆ 2,000 ರೂಪಾಯಿಗೂ ಅಧಿಕ ಕುಸಿತ ದಾಖಲಾಗಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಇಳಿಕೆಯ ಹಾದಿ ಹಿಡಿದಿರುವುದು ವಿಶೇಷ. ಈ ವಾರಾಂತ್ಯದಲ್ಲಿ ಪ್ರತಿ ಗ್ರಾಮ್ ಚಿನ್ನದ ಬೆಲೆ ಸುಮಾರು 300 ರೂ.ಗಳಷ್ಟು ಏರಿಕೆ ಕಂಡಿದ್ದರೂ, ಒಟ್ಟಾರೆ ಮಾಸಿಕ ಲೆಕ್ಕಾಚಾರದಲ್ಲಿ ಗ್ರಾಹಕರಿಗೆ ಇದು ಲಾಭದಾಯಕವಾಗಿದೆ. ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಮುಂದುವರಿದಿದ್ದು, ಕಳೆದ ಎರಡು ದಿನಗಳಲ್ಲಿ 15 ರೂಪಾಯಿಯಷ್ಟು ದರ ತಗ್ಗಿದೆ.
ಇಂದಿನ ಮಾರುಕಟ್ಟೆ ದರಗಳು:
22 ಕ್ಯಾರಟ್ ಆಭರಣ ಚಿನ್ನ (10 ಗ್ರಾಂ): 1,33,800 ರೂ.
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,45,970 ರೂ.
ಬೆಳ್ಳಿ (100 ಗ್ರಾಂ): 24,500 ರೂ. (ಬೆಂಗಳೂರು)



