ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಅಬ್ಬರ ಮುಂದುವರಿದಿದೆ. ವಿದೇಶಿ ಮಾರುಕಟ್ಟೆಯಲ್ಲಿನ ಭಾರಿ ಏರಿಕೆಯ ಪ್ರಭಾವದಿಂದಾಗಿ ಭಾರತದಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಎತ್ತರಕ್ಕೆ ಏರಿವೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈ ಲೋಹಗಳು ಇಂದು ಕೂಡ ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ.
ಭಾರತದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 35 ರೂಪಾಯಿಯಷ್ಟು ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನ: ₹1,30,650
24 ಕ್ಯಾರೆಟ್ (ಅಪರಂಜಿ): ₹1,42,530
ಬೆಳ್ಳಿ ಬೆಲೆ ಇಂದು ಕೂಡ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು, ಹೊಸ ದಾಖಲೆ ಬರೆದಿದೆ. ಮಂಗಳವಾರ ಬೆಳ್ಳಿ ಬೆಲೆಯಲ್ಲಿ 5 ರೂಪಾಯಿಯಷ್ಟು ಏರಿಕೆಯಾಗಿದೆ.
100 ಗ್ರಾಮ್ ಬೆಳ್ಳಿ: ₹27,500
ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ ₹29,200 ರಷ್ಟಿದೆ.


