Wednesday, December 24, 2025

Gold Rate | ಹೂಡಿಕೆದಾರರ ಕಣ್ಣು ಈಗ ಬೆಳ್ಳಿಯ ಮೇಲೆ! ದಾಖಲೆಯತ್ತ ಮುನ್ನುಗ್ಗುತ್ತಿದೆ ‘ಬಡವರ ಬಂಗಾರ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆ ಏರಿಕೆ ಗ್ರಾಹಕರ ನಿದ್ದೆಗೆಡಿಸಿದೆ. ಅದರಲ್ಲೂ ವಿಶೇಷವಾಗಿ ಬೆಳ್ಳಿ ಬೆಲೆಯು ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಇಂದು ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳ ದರದಲ್ಲಿ ಏರಿಕೆ ಕಂಡುಬಂದಿದೆ.

ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ ಸುಮಾರು 30 ರೂಪಾಯಿ ಸಾಧಾರಣ ಏರಿಕೆಯಾಗಿದ್ದರೆ, ಬೆಳ್ಳಿಯು ಬರೋಬ್ಬರಿ 10 ರೂಪಾಯಿ (ಪ್ರತಿ ಗ್ರಾಮ್‌ಗೆ) ಜಂಪ್ ಮಾಡುವ ಮೂಲಕ ಗಮನ ಸೆಳೆದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನಕ್ಕಿಂತಲೂ ಬೆಳ್ಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

22 ಕ್ಯಾರಟ್ ಚಿನ್ನ: 10 ಗ್ರಾಮ್‌ಗೆ 1,27,350 ರೂಪಾಯಿ.

24 ಕ್ಯಾರಟ್ ಅಪರಂಜಿ ಚಿನ್ನ: 10 ಗ್ರಾಮ್‌ಗೆ 1,38,930 ರೂಪಾಯಿ.

ಬೆಳ್ಳಿ ಬೆಲೆ: 100 ಗ್ರಾಮ್ ಬೆಳ್ಳಿಯ ದರ 23,300 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 23,300 ರೂಪಾಯಿ ಇದ್ದರೆ, ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ ಈಗಾಗಲೇ 24,400 ರೂಪಾಯಿ ಗಡಿಯನ್ನು ದಾಟಿದೆ. ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಈ ದಿಢೀರ್ ಏರಿಕೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!