ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುಕಟ್ಟೆಯಲ್ಲಿ ಬಹಳ ದಿನಗಳ ನಂತರ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 300 ರಿಂದ 500 ರೂಪಾಯಿಗಳಷ್ಟು ಹೆಚ್ಚಳವಾಗಿದ್ದರೆ, ಬೆಳ್ಳಿ ಕೂಡ ಪ್ರತಿ ಗ್ರಾಮ್‌ಗೆ 10 ರೂಪಾಯಿ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಜಾಗತಿಕ ಮಟ್ಟದಲ್ಲಿ ಚೀನಾದ ಸೆಂಟ್ರಲ್ ಬ್ಯಾಂಕ್ ಸತತವಾಗಿ ಚಿನ್ನವನ್ನು ಖರೀದಿ ಮಾಡುತ್ತಿರುವುದು ಈ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಇಂದಿನ ದರ ವಿವರ:
22 ಕ್ಯಾರೆಟ್ ಚಿನ್ನ (10 ಗ್ರಾಮ್): 1,41,000
24 ಕ್ಯಾರೆಟ್ ಅಪರಂಜಿ ಚಿನ್ನ (10 ಗ್ರಾಮ್): 1,53,820
ಬೆಳ್ಳಿ (100 ಗ್ರಾಮ್): 26,000
ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನಕ್ಕೆ 1,41,000 ಹಾಗೂ 100 ಗ್ರಾಮ್ ಬೆಳ್ಳಿಗೆ 26,000 ದರವಿದೆ. ಇನ್ನುಳಿದಂತೆ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ದರ ಪ್ರತಿ 100 ಗ್ರಾಮ್‌ಗೆ 26,500 ರಷ್ಟಿದೆ.



