ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಮೂರು ದಿನಗಳಿಂದ ಇಳಿಕೆ ಕಂಡು ಗ್ರಾಹಕರಿಗೆ ಸಮಾಧಾನ ತಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದಿದ್ದರೂ, ಸ್ಥಳೀಯವಾಗಿ ಆಭರಣ ಚಿನ್ನದ ಬೆಲೆ ಇಂದು 15 ರೂಪಾಯಿಗಳಷ್ಟು ಏರಿಕೆಯಾಗಿದೆ.
ನಿನ್ನೆ ಚಿನ್ನದ ಬೆಲೆಯಲ್ಲಿ 120 ರೂಪಾಯಿಗಳಷ್ಟು ಭರ್ಜರಿ ಇಳಿಕೆಯಾಗಿತ್ತು. ಆದರೆ ಇಂದು ಬೆಲೆ ಏರಿಕೆಯಾದ ನಂತರವೂ 22 ಕ್ಯಾರಟ್ ಚಿನ್ನದ ಬೆಲೆ 12,400 ರೂಪಾಯಿಗಳ ಗಡಿಗಿಂತ ಕೆಳಗಿರುವುದು ವಿಶೇಷ. ಸದ್ಯ ಭಾರತದಲ್ಲಿ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ 1,23,800 ರೂಪಾಯಿ ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,35,060 ರೂಪಾಯಿ ತಲುಪಿದೆ.
ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆ ಮಾತ್ರ ಇಳಿಕೆಯ ಹಾದಿಯಲ್ಲೇ ಸಾಗಿದೆ. ನಿನ್ನೆ ಒಂದು ರೂಪಾಯಿ ಇಳಿಕೆಯಾಗಿದ್ದ ಬೆಳ್ಳಿ ಬೆಲೆ, ಇಂದು ಕೂಡ ಒಂದು ರೂಪಾಯಿ ತಗ್ಗಿದೆ. ಇದರೊಂದಿಗೆ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 238 ರೂಪಾಯಿ ತಲುಪಿದೆ.

