ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಎರಡು ದಿನಗಳ ಏರಿಕೆಯ ಬಳಿಕ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಗುರುವಾರ 100 ರೂ ಇಳಿಕೆಯಾಗಿದ್ದ ಚಿನ್ನದ ದರವು ಶುಕ್ರವಾರವೂ ಕುಸಿತ ಕಂಡಿದ್ದು, ಇಂದಿಗೆ ಮತ್ತೆ 90 ರೂ ಕಡಿಮೆಯಾಗಿದೆ. ಈ ಮೂಲಕ ಎರಡು ದಿನಗಳಲ್ಲಿ ಒಟ್ಟು 190 ಇಳಿಕೆಯಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,47,800 ಆಗಿದೆ. ಅದೇ ವೇಳೆ 24 ಕ್ಯಾರಟ್ ಅಪರಂಜಿ ಚಿನ್ನದ ದರ 1,61,240ಕ್ಕೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಹೆಚ್ಚಿನ ಬದಲಾವಣೆ ಕಾಣಿಸದಿದ್ದು, 100 ಗ್ರಾಂ ಬೆಳ್ಳಿ ಸುಮಾರು 28,000 ದರದಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿಯೂ ಇದೇ ದರಗಳು ದಾಖಲಾಗಿವೆ.
ಇದನ್ನೂ ಓದಿ:
ಗ್ರಾಂ ಮಟ್ಟದಲ್ಲಿ ನೋಡಿದರೆ, 24 ಕ್ಯಾರಟ್ ಚಿನ್ನದ ಬೆಲೆ 16,124 ಆಗಿದ್ದು, 22 ಕ್ಯಾರಟ್ ಚಿನ್ನ 14,780 ದರದಲ್ಲಿ ಮಾರಾಟವಾಗುತ್ತಿದೆ. 18 ಕ್ಯಾರಟ್ ಚಿನ್ನದ ಬೆಲೆ 12,093 ಇದೆ. ಬೆಳ್ಳಿ ದರ ಪ್ರತಿ ಗ್ರಾಂಗೆ 280 ಆಗಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ದುಬೈ, ಅಮೆರಿಕ ಹಾಗೂ ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಬೆಲೆ ಕಡಿಮೆಯಾಗಿರುವುದು ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು ವರದಿಗಳು ಸೂಚಿಸುತ್ತಿವೆ.



