March 26, 2026
Thursday, March 26, 2026
spot_img

Gold Rates | ಯುದ್ಧದ ಬಿಸಿ ಚಿನ್ನ-ಬೆಳ್ಳಿಗೆ ತಟ್ಟಿಲ್ಲ ಅನ್ಸುತ್ತೆ: ಗ್ರಾಮ್‌ಗೆ ಮತ್ತೆ 90 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಬುಧವಾರ ಗ್ರಾಮ್‌ಗೆ ಸುಮಾರು 500 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ, ಗುರುವಾರ ಮತ್ತೆ ಸುಮಾರು 90 ರೂ ತಗ್ಗಿದ್ದು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ. ಇದರೊಂದಿಗೆ ಚಿನ್ನದ ದರ 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ಇತ್ತ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,49,900 ರೂ ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 1,63,530 ರೂ ಮಟ್ಟದಲ್ಲಿದೆ. ಇದೇ ವೇಳೆ 100 ಗ್ರಾಂ ಬೆಳ್ಳಿ ಬೆಲೆ 28,500 ರೂ ಆಗಿದೆ.

ಇದನ್ನೂ ಓದಿ:

ಪ್ರಸ್ತುತ ದೇಶದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 16,353 ರೂ, 22 ಕ್ಯಾರಟ್ ಚಿನ್ನದ 1 ಗ್ರಾಂ 14,990 ರೂ, ಹಾಗೂ 18 ಕ್ಯಾರಟ್ ಚಿನ್ನದ 1 ಗ್ರಾಂ 12,265 ರೂ ಇದೆ. ಬೆಳ್ಳಿ ಬೆಲೆ 1 ಗ್ರಾಂಗೆ 285 ರೂ ಆಗಿದೆ. ವಿದೇಶಗಳಲ್ಲೂ ಚಿನ್ನದ ದರ ಕುಸಿತ ಕಂಡುಬಂದಿದ್ದು ದುಬೈ, ಸಿಂಗಾಪುರ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ದರ ಕಡಿಮೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !