March 30, 2026
Monday, March 30, 2026
spot_img

Gold Rates | ನಿನ್ನೆ ಕಡಿಮೆ, ಇಂದು ಜಾಸ್ತಿ: ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆ, ಮಂಗಳವಾರದ ಹೊಸ ಬೆಲೆ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಸ್ವಲ್ಪ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮಂಗಳವಾರ ಮತ್ತೆ ಏರಿಕೆಯಾಗಿದೆ. ಇಂದು ಬಂಗಾರದ ಬೆಲೆ ಈಗ 65 ರೂಪಾಯಿ ಹೆಚ್ಚಳ ಕಂಡಿದೆ. ಇದೇ ವೇಳೆ ಬೆಳ್ಳಿಯ ದರವೂ ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ ಸುಮಾರು 10 ರೂಪಾಯಿ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಶ್ರ ಪ್ರವೃತ್ತಿ ಕಾಣಿಸಿಕೊಂಡಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಕೆ ದಾಖಲಾಗಿದೆ.

ಇದನ್ನೂ ಓದಿ:

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,48,850 ರೂಪಾಯಿಯಾಗಿದೆ. ಅದೇ ವೇಳೆ 24 ಕ್ಯಾರಟ್ ಚಿನ್ನದ ಬೆಲೆ 1,62,380 ರೂಪಾಯಿ ಇದೆ. ಬೆಳ್ಳಿಯ ದರ 100 ಗ್ರಾಂಗೆ ಸುಮಾರು 29,000 ರೂಪಾಯಿಯಾಗಿ ದಾಖಲಾಗಿದೆ.

ಅಭರಣ ಖರೀದಿಸುವವರು ಗಮನಿಸಬೇಕಾದ ವಿಷಯವೆಂದರೆ, ಇಲ್ಲಿ ನೀಡಿರುವ ದರಗಳ ಮೇಲೆ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳಂತಹ ಹೆಚ್ಚುವರಿ ಶುಲ್ಕಗಳು ಸೇರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !