February 9, 2026
Monday, February 9, 2026
spot_img

ಉತ್ತಮ ಆಹಾರ, ನಿದ್ರೆ, ಶಿಸ್ತು…ಪರೀಕ್ಷಾ ಪೇ ಚರ್ಚಾದಲ್ಲಿ ಮಕ್ಕಳಿಗೆ ಜೀವನದ ಪಾಠ ಮಾಡಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮ “ಪರೀಕ್ಷಾ ಪೆ ಚರ್ಚಾ 2026” ನ ಎರಡನೇ ಭಾಗದಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರಿಗೆ ಓದು, ವೃತ್ತಿ, ತಂತ್ರಜ್ಞಾನ ಮತ್ತು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.ಪ್ರಧಾನಿ ಮೋದಿ ಮಕ್ಕಳ ಗೊಂದಲಗಳನ್ನು ದೂರ ಮಾಡಲು ಸಾಥ್ ನೀಡಿದ್ದಾರೆ.

ಈ ವೇಳೆ ಓರ್ವ ವಿದ್ಯಾರ್ಥಿ, ಪ್ರಧಾನಿ ಮೋದಿಯವರ ಆಹಾರ ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ಪಶ್ನೆ ಉತ್ತರಿಸಿದ್ದಾರೆ.

ಪ್ರಧಾನಿ ಮೋದಿ ಯಾವುದೇ ನಿರ್ದಿಷ್ಟ ಡಯಟ್ ಪದ್ಧತಿ ಫಾಲೋ ಮಾಡ್ತಿಲ್ಲ. ವಿವಿಧ ರಾಜ್ಯ, ದೇಶಕ್ಕೆ ಪ್ರಯಾಣ ಬೆಳೆಸೋದ್ರಿಂದ ಅಲ್ಲಿ ಸಿಗೋ ಆಹಾರವನ್ನೇ ಅವರು ಸೇವನೆ ಮಾಡುತ್ತಾರೆ.

ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಹಾಗೂ ಸರಿಯಾದ ರೀತಿಯಲ್ಲಿ ಉಸಿರಾಟ ಕ್ರಿಯೆ ದೇಹಕ್ಕೆ ಪ್ರಯೋಜನಕಾರಿ ಎಂದು ಮೋದಿ ಹೇಳಿದ್ದಾರೆ. ಆಹಾರವನ್ನು ಹೊಟ್ಟೆ ತುಂಬುವವರೆಗೆ ತಿನ್ನಬೇಕೆ ಅಥವಾ ಮನಸ್ಸಿಗೆ ತೃಪ್ತಿಯಾಗುವವರೆಗೆ ತಿನ್ನಬೇಕೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಕೆಲವು ಜನರು ಅತಿಯಾಗಿ ತಿನ್ನುತ್ತಾರೆ. ಆದರೆ ಅಷ್ಟು ಆಹಾರ ದೇಹಕ್ಕೆ ಅಗತ್ಯವಿಲ್ಲ ಎಂಬುದನ್ನು ಅವರು ಅರ್ಥ ಮಾಡ್ಕೊಳ್ಳೋದಿಲ್ಲ ಎಂದು ಮೋದಿ ಹೇಳಿದ್ದಾರೆ.

ಇನ್ನು ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನ ಏಳುವ ಕುರಿತು ಮಾತನಾಡಿದ ಮೋದಿ, ಸೂರ್ಯೋದಯವನ್ನು ನೋಡುವಂತಹ ಸಣ್ಣ ಅಭ್ಯಾಸಗಳು ದೇಹ ಮತ್ತು ಮನಸ್ಸು ಎರಡನ್ನೂ ಉಲ್ಲಾಸಗೊಳಿಸುತ್ತದೆ. ಬೆಳಿಗ್ಗೆ ಬೇಗ ಏಳೋದು ನಿತ್ಯದ ದಿನಚರಿ ಆಗ್ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಯಾವ ರೀತಿ ನಾವು ಮುಂಜಾನೆ ಏಳುತ್ತೇವೆ, ಹಾಗೆಯೇ ಸರಿಯಾದ ಪ್ರಮಾಣದಲ್ಲಿ ನಿದ್ರೆ ಕೂಡ ಮುಖ್ಯ. ಉತ್ತಮ ನಿದ್ರೆ ಮನಸ್ಸನ್ನು ತಾಜಾವಾಗಿರಿಸುತ್ತದೆ. ಹೊಸ ಆಲೋಚನೆಗಳು ಬರಲು ಕಾರಣವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಅದೇ ರೀತಿ ದೇಹಕ್ಕೆ ಕೊನೆಯ ಆದ್ಯತೆ ನೀಡುತ್ತಾರೆ. ಆರೋಗ್ಯಕರ ದೇಹವು ಮನಸ್ಸು ಮತ್ತು ಮೆದುಳನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಧ್ಯಯನದ ಜೊತೆಗೆ ತನ್ನನ್ನು ತಾನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಮೋದಿ ವಿವರಿಸಿದ್ದಾರೆ.

ಶಿಸ್ತು ಇಲ್ಲದ ವ್ಯಕ್ತಿಗೆ ಎಷ್ಟೇ ಸ್ಫೂರ್ತಿ ಸಿಕ್ಕರೂ ಪ್ರಯೋಜನವಿಲ್ಲ. ಹಾಗಾಗಿ ಜೀವನದಲ್ಲಿ ಶಿಸ್ತು ಮತ್ತು ಪ್ರೇರಣೆ ಎರಡೂ ಅತ್ಯಗತ್ಯ. ಒಬ್ಬ ರೈತನಿಗೆ ಸ್ಫೂರ್ತಿ ಸಿಗಬಹುದು, ಆದರೆ ಶಿಸ್ತಿನ ಕೊರತೆಯಿದ್ದರೆ, ಒಬ್ಬರು ಹೆಚ್ಚು ಗಳಿಸಿದರೆ, ಇನ್ನೊಬ್ಬರು ಕಡಿಮೆ ಗಳಿಸುತ್ತಾರೆ. ಶಿಸ್ತು ಮತ್ತು ಸ್ಫೂರ್ತಿ ಸೇರಿಕೊಂಡರೆ ಎಲ್ಲವೂ ಚೆನ್ನಾಗಿರುತ್ತದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !