February 3, 2026
Tuesday, February 3, 2026
spot_img

ರಫ್ತುದಾರರಿಗೆ ಗುಡ್‌ ನ್ಯೂಸ್: ಸತತ 5 ದಿನಗಳ ಕುಸಿತದ ಬಳಿಕ ಸ್ಥಿರಗೊಂಡ ಚಿನ್ನದ ದರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರ ಅಂತಿಮವಾಗಿ ಚೇತರಿಕೆ ಕಂಡಿವೆ. ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಮಹತ್ವದ ವ್ಯಾಪಾರ ಒಪ್ಪಂದವು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿರುವುದು ಈ ಬದಲಾವಣೆಗೆ ಮುಖ್ಯ ಕಾರಣವಾಗಿದೆ.

ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಪರಸ್ಪರ ಸುಂಕವನ್ನು ಶೇ. 25 ರಿಂದ 18 ಕ್ಕೆ ಇಳಿಸಲು ಎರಡೂ ದೇಶಗಳು ಸಮ್ಮತಿಸಿವೆ. ಈ ನಿರ್ಧಾರವು ವಿಶೇಷವಾಗಿ ರತ್ನಗಳು ಮತ್ತು ಆಭರಣಗಳ ರಫ್ತು ವಲಯಕ್ಕೆ ಬೂಸ್ಟ್ ನೀಡಿದ್ದು, ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ:

ಇಂದಿನ ಮಾರುಕಟ್ಟೆ ದರಗಳು: ಭೌತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಬೆಲೆಗಳು ಸೋಮವಾರಕ್ಕೆ ಹೋಲಿಸಿದರೆ ಹೆಚ್ಚಿನ ಏರಿಳಿತವಿಲ್ಲದೆ ಸ್ಥಿರವಾಗಿವೆ:

ಲೋಹಇಂದಿನ ಅಂದಾಜು ಬೆಲೆಬದಲಾವಣೆ
ಚಿನ್ನ (24 ಕ್ಯಾರೆಟ್ – 10 ಗ್ರಾಂ)₹ 1,51,750₹ 142 ಇಳಿಕೆ
ಬೆಳ್ಳಿ (1 ಕೆಜಿ)₹ 2,80,000₹ 200 ಇಳಿಕೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !