Saturday, November 22, 2025

ಭಾರತೀಯ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ ! ಆಸ್ಟ್ರೇಲಿಯಾ ಶಿಕ್ಷಣ ಕನಸಿಗೆ ನಿವಿಕ್ಯಾಪ್‌ ನೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆಯುವ ಕನಸು ಹೊತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ‘ನಿವಿಕ್ಯಾಪ್‌’ ಸುಗಮ ಶಿಕ್ಷಣದ ಹಾದಿಯನ್ನು ಒದಗಿಸುತ್ತಿದೆ.

ಈ ನಿಟ್ಟಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಶಿಕ್ಷಣ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾದ ಹೂಡಿಕೆ ಮತ್ತು ರಾಷ್ಟ್ರೀಯ ವ್ಯಾಪಾರ ಏಜೆನ್ಸಿ ಬೆಂಬಲಿತ ‘ನಿವಿಕ್ಯಾಪ್‌’ ಆಪ್‌ನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಸ್ಟಿನ್ ಲ್ಯಾಂಗರ್ ಅವರು ನಿವಿಕ್ಯಾಪ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಈ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಹೆಸರಾಂತ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರನ್ನು ನಿವಿಕ್ಯಾಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲಾಯಿತು. ಈ ವಿಶೇಷ ವೇದಿಕೆಯು “ವೇಗ. ನ್ಯಾಯಯುತ. ಕುಟುಂಬ-ಅನುಮೋದಿತ.

ಆಸ್ಟ್ರೇಲಿಯಾದಲ್ಲಿ ಆರ್ಥಿಕ ಅಡೆತಡೆಗಳಿಲ್ಲದೆ ಶೈಕ್ಷಣಿಕ ಕನಸುಗಳು” ಎಂಬ ಧ್ಯೇಯದೊಂದಿಗೆ ಶಿಕ್ಷಣ, ಹಣಕಾಸು ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ. ಆಸ್ಟ್ರೇಲಿಯಾ ಉದ್ಯೋಗ ಅವಕಾಶಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಪ್ರಮುಖ ಅಂತರರಾಷ್ಟ್ರೀಯ ಶೈಕ್ಷಣಿಕ ತಾಣವಾಗಿ ಹೆಸರಾಗಿದೆ. 2025 ರಲ್ಲಿ ಆಸ್ಟ್ರೇಲಿಯಾದಲ್ಲಿ ಅಂತರರಾಷ್ಟ್ರೀಯ ಶಿಕ್ಷಣ ಪಡೆಯುವವರಲ್ಲಿ ಸುಮಾರು 1,37,703 ವಿದ್ಯಾರ್ಥಿಗಳೊಂದಿಗೆ ಭಾರತ ಎರಡನೇ ಅತಿದೊಡ್ಡ ದೇಶವಾಗಿದೆ.

ವಿಶ್ವವಿದ್ಯಾಲಯದ ಪ್ರವೇಶ ಪೂರ್ವದಿಂದ ಆಗಮನದ ನಂತರದವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಬ್ಬರನ್ನೂ ಬೆಂಬಲಿಸಲು ವಿನ್ಯಾಸಗೊಳಿಸಲಾದ ಈ ಆಪ್‌, ಸಾಲ ಅನ್ವೇಷಣೆ, ಅರ್ಜಿ ನೆರವು, ವಿದೇಶೀ ವಿನಿಮಯ ಮಾರ್ಗದರ್ಶನ ಮತ್ತು ಆಗಮನದ ನಂತರದ ಬೆಂಬಲದಂತಹ ಸೇವೆಗಳನ್ನು ಒಂದೇ ಸುರಕ್ಷಿತ ಡಿಜಿಟಲ್ ಪರಿಹಾರ ವೇದಿಕೆಯಡಿಯಲ್ಲಿ ಒಟ್ಟುಗೂಡಿಸುತ್ತದೆ. ನಿವಿಕ್ಯಾಪ್‌ ಪಾರದರ್ಶಕತೆ, ತಂತ್ರಜ್ಞಾನ ಮತ್ತು ಸಹಾನುಭೂತಿಯನ್ನು ಸಂಯೋಜಿಸುವಲ್ಲಿ ಭಿನ್ನವಾಗಿದೆ, ಇದು ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಗುರಿಗಳನ್ನು ತಲುಪಲು ಸುಲಭ ಮಾರ್ಗವನ್ನು ನೀಡುತ್ತದೆ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಪ್ರತಿ ಹಂತದಲ್ಲೂ ಬೆಂಬಲವಿದೆ ಎಂದು ತಿಳಿದುಕೊಳ್ಳುವ ಸೌಕರ್ಯವನ್ನು ನೀಡುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿವಿಕ್ಯಾಪ್‌ನ ಸಂಸ್ಥಾಪಕ ಶ್ರೀ ಕಾರ್ತಿಕ್ ಶ್ರೀನಿವಾಸನ್ “ಭಾರತೀಯ ಮೂಲದ ಆಸ್ಟ್ರೇಲಿಯನ್ ಆಗಿ, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಸಾಗುವ ದಾರಿಯಲ್ಲಿ ನಾನು ಈ ಹಿಂದೆ ಸಾಗಿದ್ದೇನೆ. ದಾಖಲೆ ಪತ್ರಗಳನ್ನು, ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವ ಕಷ್ಟ, ಮನೆಯಿಂದ ದೂರವಿರುವ ಭಾವನೆಯನ್ನು ಅನುಭವಿಸಿದ್ದೇನೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಸಂಕೀರ್ಣ ನಿಯಮಗಳು, ಅಂತರಾಷ್ಟ್ರೀಯ ಗಡಿ ವ್ಯವಸ್ಥೆಗಳು ಹೇಗೆ ಅಂತರಾಷ್ಟ್ರೀಯ ಶಿಕ್ಷಣದ ವ್ಯವಹಾರವನ್ನು ಸಂಕೀರ್ಣಗೊಳಿಸುತ್ತವೆ ಎಂಬುದನ್ನು ಅರಿತಿದ್ದೇನೆ, ನಿವಿಕ್ಯಾಪ್‌ನ್ನು ಕೇವಲ ಡಿಜಿಟಲ್ ಪರಿಹಾರ ವೇದಿಕೆಯಾಗಿ ಅಲ್ಲ, ಬದಲಾಗಿ ಆಕಾಂಕ್ಷೆ ಮತ್ತು ಸಾಧನೆಯ ನಡುವಿನ ಸೇತುವೆಯಾಗಿ ನಿರ್ಮಿಸಲಾಗಿದೆ” ಎಂದರು.

ನಿವಿಕ್ಯಾಪ್‌ ತನ್ನ ಮೊದಲ ಹಂತದಲ್ಲಿ ಶಿಕ್ಷಣ ಸಾಲಗಳನ್ನು ಪ್ರಾರಂಭಿಸುವುದರೊಂದಿಗೆ ಕಾರ್ಯಾರಂಭ ಮಾಡಲಿದ್ದು, ಇದು ವಿದ್ಯಾರ್ಥಿಗಳಿಗೆ ಸಾಲಗಳನ್ನು ಡಿಜಿಟಲ್ ರೂಪದಲ್ಲಿ ಅನ್ವೇಷಿಸಲು, ಅರ್ಜಿ ಸಲ್ಲಿಸಲು ಮತ್ತು ನಿರ್ವಹಿಸಲು ಸಮಗ್ರ ವೇದಿಕೆಯನ್ನು ಒದಗಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ನಂತರದ ಹಂತಗಳಲ್ಲಿ ಬಿಡುಗಡೆಯಾಗುವ ಸೌಲಭ್ಯಗಳು ಫಾರೆಕ್ಸ್ ಮತ್ತು ಆಗಮನದ ನಂತರದ ಬೆಂಬಲಕ್ಕಾಗಿ ವೈಶಿಷ್ಟ್ಯಗಳನ್ನು ಪರಿಚಯಿಸುತ್ತವೆ, ಬೆಂಬಲದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪೂರ್ಣಗೊಳಿಸುತ್ತವೆ.

error: Content is protected !!