Sunday, October 12, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ಟೆಸ್ಟಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆರ್.ವಿ ರೋಡ್ದಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ರೈಲು ಬಂದಿದೆ. ಸದ್ಯಕ್ಕೆ BMRCL ಈ ರೈಲಿನ ಟೆಸ್ಟಿಂಗ್ ಕಾರ್ಯವನ್ನು ಆರಂಭಿಸಿದೆ. ಟೆಸ್ಟಿಂಗ್ ಯಶಸ್ವಿಯಾದ ನಂತರ, ಈ ಐದನೇ ರೈಲು ಯೆಲ್ಲೋ ಲೈನ್ ನಲ್ಲಿ ಸಂಚಾರ ಆರಂಭವಾಗಲಿದೆ.

ಯೆಲ್ಲೋ ಲೈನ್ ಗೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆರಂಭದಲ್ಲಿ ನಾಲ್ಕು ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಕಾರಣ 19 ನಿಮಿಷಕ್ಕೊಂದು ಮೆಟ್ರೋ ಸಂಚಾರವಾಗುತ್ತಿತ್ತು. ಹೊಸ ಐದನೇ ರೈಲಿನ ಸೇರ್ಪಡೆಯೊಂದಿಗೆ ಸಂಚಾರ ಅವಧಿ 15 ನಿಮಿಷಕ್ಕೆ ಕಡಿಮೆಯಾಗಲಿದೆ.

ಕೊಲ್ಕತ್ತಾದ ಟಿಟಾಗರ್ ರೈಲ್ವೇ ಸಿಸ್ಟಮ್ ಲಿಮಿಟೆಡ್ನಿಂದ ಹೊಸ ಬೋಗಿಗಳು ಸೆಪ್ಟೆಂಬರ್ 19 ರಂದು ಬೆಂಗಳೂರಿಗೆ ತಲುಪಿದ್ದವು. ಎಲ್ಲಾ ಬೋಗಿಗಳು ಜೋಡಣೆಯಾದ ನಂತರ, 20 ದಿನಗಳ ಕಾಲ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈ ಪರೀಕ್ಷೆಗಳು ನಡೆಯಲಿವೆ.

ಆರ್.ವಿ ರೋಡ್ – ಬೊಮ್ಮಸಂದ್ರ ಮಾರ್ಗಕ್ಕೆ ಒಟ್ಟು ಹದಿನೈದು ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಈಗ ಐದು ರೈಲುಗಳು ಮಾತ್ರ ತಲುಪಿವೆ. ಇನ್ನು ಉಳಿದ ಹತ್ತು ರೈಲುಗಳಲ್ಲಿ ಈ ತಿಂಗಳು ಒಂದನ್ನು ಪಡೆಯಲು ನಿರೀಕ್ಷೆ ಇದೆ. ನವೆಂಬರ್ ತಿಂಗಳಲ್ಲಿ ಮತ್ತೆರಡು ರೈಲುಗಳು ಬರಲಿದೆ. ಎಲ್ಲಾ ರೈಲುಗಳು ಕಾರ್ಯನಿರ್ವಹಿಸಿದ ನಂತರ, ಗ್ರೀನ್ ಮತ್ತು ಪರ್ಪಲ್ ಲೈನ್ಗಳಂತೆ ಯೆಲ್ಲೋ ಲೈನ್ನಲ್ಲಿ ಮೆಟ್ರೋಗಳು 5 ನಿಮಿಷಕ್ಕೊಂದು ಸಂಚರಿಸುವ ವ್ಯವಸ್ಥೆ ಕಾರ್ಯಾರಂಭವಾಗಲಿದೆ.

error: Content is protected !!