ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿರುವ ಅನೇಕ ವಿಶೇಷತೆಗಳು ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿಯೂ ಕಾಣಸಿಗುವುದಿಲ್ಲ. ಮೈಸೂರಿನ ಅನೇಕ ಗತವೈಭವಗಳಲ್ಲಿ ಒಂದಾದ ಪಾರಂಪರಿಕ ಟಾಂಗ್ ಸವಾರಿಗೆ ಈಗ ಅಭಿವೃದ್ಧಿಯ ಭಾಗ್ಯ ದೊರಕಿದೆ.
ಹೌದು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅಭಿವೃದ್ಧಿಗೆ ಈಗ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದ್ದು ಮೈಸೂರು ಅಭಿವೃದ್ಧಿಗೆ ಸ್ವದೇಶ ದರ್ಶನ 2.0 ಯೋಜನೆಯ ಅಡಿಯಲ್ಲಿ ಮೈಸೂರು ಟಾಂಗ್ ಅಭಿವೃದ್ಧಿಗೆ ಮುಂದಾಗಿದೆ.
ಸುಮಾರು 2.71 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಟಾಂಗ್ ಸವಾರಿಗೆ ಟಾಂಗ್ ರೈಡ್ ಎಕ್ಸ್ ಪೀರಿಯನ್ಸ್ ಜೋನ್ ಸಿದ್ದಪಡಿಸುತ್ತಿದ್ದು ಈ ಯೋಜನೆಯಿಂದಲಾದರೂ ಟಾಂಗ್ ಮಾಲೀಕರಿಗೆ ಶುಕ್ರದೆಸೆ ಶುರುವಾಗಬಹುದು.
ಮೈಸೂರಿನಲ್ಲಿ ಸುಮಾರು 40 ಟಾಂಗ್ ಹಾಗೂ 20 ಸಾರೋಟಗಳು ಇದೆ. ಈ ಟಾಂಗ್ ಗಳು ಮೈಸೂರಿನ ಎರಡು ಮೂರು ಸ್ಥಳಗಳಲ್ಲಿ ನಿಲ್ಲುತ್ತದೆ. ಜೊತೆಗೆ ಪ್ರವಾಸಿಗರಿಗೆ ಒಂದು ದರ ಇರಲಿಲ್ಲ. ರಾಜ್ಯ ಹಾಗೂ ಹೊರ ರಾಜ್ಯದ ಜನಗಳಿಗೆ ಅದರಲ್ಲೂ ವಿದೇಶಿ ಪ್ರವಾಸಿಗರು ಆಗಮಿಸಿದರೆ ಅವರಿಗೆ ಯಾವ ಬೆಲೆ ಬೇಕು ಆ ಬೆಲೆಯನ್ನು ಟಾಂಗ್ ಮಾಲೀಕರು ಹೇಳುತ್ತಿದ್ದರು. ಈ ಕಾರಣದಿಂದ ಕೆಲವು ಪ್ರವಾಸಿಗರು ಟಾಂಗ್ ಸವಾರಿ ಮಾಡಬೇಕು ಎಂದರೂ ದುಬಾರಿ ಹಣ ನೀಡಿ ತೆರಳುವುದಕ್ಕೆ ಆಗುವುದಿಲ್ಲ ಎಂದು ಹಿಂತಿರುಗುತ್ತಿದ್ದರು.

