ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಇದ್ದು, ದಿನದ ಪಾಸ್ 3 ದಿನದ ಪಾಸ್ ಮತ್ತು 5 ದಿನದ ಪಾಸ್ ಗಳು ಪರಿಚಯಿಸಿದೆ.
ಅನಿಯಮಿತ ಪ್ರಯಾಣ ಪಾಸ್ ಪರಿಚಯಿಸಿದ ‘BMRCL’ ಜನವರಿ 15 ರಿಂದ ಮೆಟ್ರೋದಲ್ಲಿ ಕ್ಯೂ ಆರ್ ಪಾಸ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮೊಬೈಲಲ್ಲಿ ಕ್ಯೂಆರ್ ಕೋಡ್ ಬಳಸಿ ಪಾಸ್ ಪಡೆಯಬಹುದು.
ಪಾಸ್ ಪಡೆಯಲು ಯಾವುದೇ ರೀತಿಯ ಭದ್ರತಾ ಠೇವಣಿ ಇರುವುದಿಲ್ಲ. ಒಂದು ದಿನದ ಪಾಸಿಗೆ ರೂ.250 ಮೂರು ದಿನಗಳ ಪಾಸಿಗೆ 550 ರೂಪಾಯಿ ಐದು ದಿನಗಳ ಪಾಸಿಗೆ 850 ರೂಪಾಯಿಯನ್ನು ಬಿಎಂಆರ್‌ಸಿಎಲ್ ದರ ನಿಗದಿಗೊಳಿಸಿದೆ. ಈ ಕುರಿತು ಬಿಎಮ್ಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.


