Wednesday, November 5, 2025

ಪ್ರಯಾಣಿಕರಿಗೆ ಗುಡ್ ನ್ಯೂಸ್ : ನವಂಬರ್‌ 1 ರಿಂದ ಯೆಲ್ಲೋ ಲೈನ್‌ನ ಐದನೇ ಮೆಟ್ರೋ ಟ್ರೇನ್ ಸಂಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೇನ್ ಮೆಟ್ರೋ  ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಯೆಲ್ಲೋ ಲೇನ್ ಮೆಟ್ರೋ ಟ್ರೇನ್ ಗಳು ಸಂಚರಿಸುತ್ತಾವೆ. ಈ ಮಾರ್ಗದಲ್ಲಿ ಸದ್ಯ ನಾಲ್ಕು ಮೆಟ್ರೋ ಟ್ರೇನ್ ಗಳು ಮಾತ್ರವೇ ಸಂಚರಿಸುತ್ತಿವೆ. ಮೆಟ್ರೋ ಟ್ರೇನ್ ಬೋಗಿಗಳ ಕೊರತೆಯಿಂದ ನಾಲ್ಕು ಮೆಟ್ರೋ ಟ್ರೇನ್ ಗಳು ಸಂಚರಿಸುತ್ತಿವೆ.  

ಈಗ ನವಂಬರ್ 1 ರಿಂದ ಐದನೇ ಮೆಟ್ರೋ ಟ್ರೇನ್ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಐದನೇ ಮೆಟ್ರೋ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.  ಹೀಗಾಗಿ ನವಂಬರ್ 1 ರಿಂದಲೇ ಐದನೇ ರೈಲು ಅನ್ನು ಮೆಟ್ರೋ ಹಳಿಗೆ ಇಳಿಸಲು ಬಿಎಂಆರ್‌ಸಿಎಲ್ ನಿರ್ಧಿರಿಸಿದೆ. ಈಗ ಪ್ರತಿ ಮೆಟ್ರೋ ಟ್ರೇನ್ ನಡುವಿನ ಸಮಯದ ಅಂತರ 19 ನಿಮಿಷ ಇದೆ. ಐದನೇ ಮೆಟ್ರೋ ರೈಲು ಸಂಚಾರ ಆರಂಭಿಸಿದ ಬಳಿಕ ಮೆಟ್ರೋ ಟ್ರೇನ್ ಗಳ ಸಂಚಾರದ ನಡುವಿನ ಸಮಯದ ಅಂತರ 15 ನಿಮಿಷಕ್ಕೆ ಇಳಿಯಲಿದೆ. 

ಐದನೇ ರೈಲಿನ ಸುರಕ್ಷಿತ ಪರೀಕ್ಷೆ ಮತ್ತು ತಾಂತ್ರಿಕ ಪರೀಕ್ಷೆ ಕಾರ್ಯ ಮುಗಿದಿದೆ.  ಐದನೇ ಮೆಟ್ರೋ ಟ್ರೇನ್‌  ನವೆಂಬರ್ 1 ರಂದು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಈ ವರ್ಷದ  ಆಗಸ್ಟ್ 10 ರಂದು ಪ್ರಧಾನಿ‌ ಮೋದಿ ಯೆಲ್ಲೋ  ಲೇನ್ ಮೆಟ್ರೋ ಮಾರ್ಗಕ್ಕೆ  ಚಾಲನೆ ಕೊಟ್ಟಿದ್ದರು .

ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸಿತ್ತು .  25 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು . ಸೆಪ್ಟಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಯಾಗಿತ್ತು . ಅದಾದ ನಂತರ ಪ್ರತಿ 19 ನಿಮಿಷಕ್ಕೊಮ್ಮೆ ರೈಲು ಸಂಚಾರ  ನಡೆಯುತ್ತಿತ್ತು.  ಈಗ ಐದನೇ ರೈಲು ಬೋಗಿಗಳು ಯೆಲ್ಲೋ ಲೇನ್‌  ತಲುಪಿದ್ದು ನವೆಂಬರ್ ತಿಂಗಳಿಂದ ಕಾರ್ಯಾಚರಣೆ ಮಾಡಲಿವೆ.  ಐದನೇ ರೈಲು ಸಂಚಾರಿಸಿದ್ರೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿವೆ. 

error: Content is protected !!