March 15, 2026
Sunday, March 15, 2026
spot_img

ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್: ಮೆಟ್ರೋ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರನ್ನು ಮೆಟ್ರೋ ನಗರಗಳು’ ಎಂದು ಕೇಂದ್ರ ಸರಕಾರ ಪರಿಗಣಿಸಿದೆ ಎಂದು ದೆಹಲಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇಷ್ಟು ದಿನ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ‘ಮೆಟ್ರೋ ನಗರಗಳು’ ಎಂದು ಕೇಂದ್ರ ಸರಕಾರ ಪರಿಗಣಿಸಿ ಪರಿಗಣಿಸಿ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುತ್ತಿತ್ತು. ಇದೀಗ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಹೊಸ ಸಿಹಿ ಸುದ್ದಿ ನೀಡಿದೆ.

ಬೆಂಗಳೂರು ವಿಶ್ವಮಟ್ಟದ ನಗರವಾಗಿದ್ದರೂ ತಾಂತ್ರಿಕವಾಗಿ ಇದನ್ನು ‘ಬಾಕಿ ನಗರಗಳ’ ಪಟ್ಟಿಯಲ್ಲಿ ಇರಿಸಲಾಗಿತ್ತು, ಹೀಗಾಗಿ ಇಲ್ಲಿನವರಿಗೆ ಕೇವಲ ಶೇ. 40 ರಷ್ಟು ಮಾತ್ರ ವಿನಾಯಿತಿ ಸಿಗುತ್ತಿತ್ತು. ಇದೀಗ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಸಂಸತ್ತಿನಲ್ಲಿ ಮತ್ತು ಹಣಕಾಸು ಸಚಿವರ ಬಳಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ಜೀವನ ವೆಚ್ಚ ದೆಹಲಿ-ಮುಂಬೈಗೆ ಸಮಾನವಾಗಿದೆ, ಆದ್ದರಿಂದ ಬೆಂಗಳೂರನ್ನು ಮೆಟ್ರೋ ಪಟ್ಟಿಗೆ ಸೇರಿಸಲೇಬೇಕು ಎಂದು ಒತ್ತಾಯಿಸಿದ್ದರು. ಇದೀಗ ಬೆಂಗಳೂರಿಗೆ ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರುವ ಭಾಗ್ಯ ಸಿಕ್ಕಿದೆ.

ಇದನ್ನೂ ಓದಿ: GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ

ಮೆಟ್ರೋ ನಗರಗಳ ಪಟ್ಟಿಗೆ ಸೇರುವುದರಿಂದ ಮೂಲ ವೇತನದ ಶೇ. 50 ರಷ್ಟು ಮೊತ್ತವನ್ನು HRA ವಿನಾಯಿತಿಯಾಗಿ ಪಡೆಯಬಹುದು. ಇದುವರೆಗೆ ಇದು ಶೇ. 40 ರಷ್ಟಿತ್ತು. ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ವಲಯದ ಲಕ್ಷಾಂತರ ಉದ್ಯೋಗಿಗಳ ಕೈಗೆ ಸಿಗುವ ವೇತನ ಹೆಚ್ಚಾಗಲಿದೆ. ತೆರಿಗೆ ಪಾವತಿ ಕಡಿಮೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !