ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿದಿನ ಭಾರತೀಯ ರೈಲ್ವೆಯಲ್ಲಿ 2 ಕೋಟಿಗೂ ಅಧಿಕ ಜನರು ಪ್ರಯಾಣ ಮಾಡುತ್ತಾರೆ. ಇದರಲ್ಲಿ ಅಂದಾಜು 20 ರಷ್ಟು ಪ್ರಯಾಣಿಕರು ಮಹಿಳೆಯಾಗಿದ್ದಾರೆ.ಇವರಿಗೆ ರೈಲ್ವೆಯಿಂದ ಗುಡ್‌ನ್ಯೂಸ್ ಸಿಕ್ಕಿದೆ.
ಹೀಗೆ ರೈಲಿನಲ್ಲಿ ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡುವ ವೇಳೆ ಮಹಿಳೆಯರಿಗೆ ಅವರು ಬುಕ್ ಮಾಡುವ ಬರ್ತ್ ಸಿಗುವುದಿಲ್ಲ. ಅಂದರೆ ಮಹಿಳೆಯರು ಆರೋಗ್ಯ ಸಮಸ್ಯೆ ಅಥಾವ ಇನ್ಯಾವುದೋ ಕಾರಣಗಳಿಂದ ಕೆಳಗಿನ ಬರ್ತ್ ಬುಕ್ ಮಾಡಿರುತ್ತಾರೆ. ಆದರೆ ಅಂತಹವರಿಗೆ ರೈಲ್ವೆ ನಿಯಮಗಳಿಂದ ಅವರ ಇಚ್ಛೆಯ ಸೀಟ್ ಸಿಗುವುದಿಲ್ಲ. ಮೇಲಿನ ಸೀಟ್‌ಗಳಿಗೆ ಹತ್ತಲು ಕೆಲ ಮಹಿಳೆಯರು ತೊಂದರೆ ಅನುಭವಿಸುತ್ತಾರೆ. ಈ ತೊಂದರೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.
ಇಂದು ರಾಜ್ಯಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಕೆಳ ಬರ್ತ್‌ಗಳನ್ನು ಒದಗಿಸುವುದಾಗಿ ತಿಳಿಸಿದರು. ಇದು ಮಹಿಳಾ ಪ್ರಯಾಣಿಕರಲ್ಲಿ ಸಮಾಧಾನ ಉಂಟುಮಾಡಿದೆ.
ರೈಲಿನಲ್ಲಿ ಪ್ರಯಾಣಿಸೋ ಮಹಿಳೆಯರಿಗೆ ಗುಡ್‌ನ್ಯೂಸ್! ಏನಂತ ಇಲ್ಲಿ ನೋಡಿ..

