Wednesday, November 26, 2025

ಸ್ನಾತಕ ಪದವಿಗಳಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗುಡ್ ನ್ಯೂಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಸ್ನಾತಕ ಪದವಿಗಳಲ್ಲಿ 2018-19 ಹಾಗೂ 2020ರ ಅವಧಿಯಲ್ಲಿ ಸಿಬಿಸಿಎಸ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿ ಅನುತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್ ತಿಳಿಸಿದ್ದಾರೆ.

ದಂಡವಿಲ್ಲದೇ ಶುಲ್ಕ ಪಾವತಿಸಲು ನವೆಂಬರ್ 15 ಕೊನೆ ದಿನವಾಗಿದೆ. ಸಿಬಿಸಿಎಸ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮನವಿ ಮೇರೆಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಅನುಮೋದನೆ ಹಾಗೂ ಕುಲಪತಿ ಅನುಮತಿ ಮೇರೆಗೆ ಈ ಅವಕಾಶ ಕಲ್ಪಿಸಲಾಗಿದೆ.

2019-20 ಮತ್ತು 2020-21ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕ ಪದವಿ ಪೂರ್ಣಗೊಳಿಸಲು 4 ವರ್ಷ ಅವಕಾಶ ನೀಡಲಾಗಿತ್ತು. ಆದರೆ, ಆ ಸಾಲಿನಲ್ಲಿ ಪರೀಕ್ಷೆ ಬರೆದ ಹಲವಾರು ವಿದ್ಯಾರ್ಥಿಗಳು ತೇರ್ಗಡೆಯಾಗಲು ಸಾಧ್ಯವಾಗದೆ ಇನ್ನೊಂದು ಅವಕಾಶಕ್ಕೆ ಕೋರಿದ್ದರು.

error: Content is protected !!