ಇಂದಿನ ದಿನ ಸವಾಲುಗಳಿಂದ ಕೂಡಿರಬಹುದು, ಮನಸ್ಸಿಗೆ ಕೊಂಚ ಭಾರವೆನಿಸಿರಬಹುದು. ಆದರೆ ನಡೆದದ್ದನ್ನೆಲ್ಲಾ ಅಲ್ಲೇ ಬಿಟ್ಟುಬಿಡಿ. ನೆಮ್ಮದಿಯ ನಿದ್ದೆ ಮಾತ್ರ ಹೊಸ ಹುರುಪನ್ನು ನೀಡಬಲ್ಲದು.
ಇವತ್ತು ಅಂದುಕೊಂಡಂತೆ ನಡೆಯದೇ ಇರಬಹುದು, ಆದರೆ ಜೀವನ ಅಲ್ಲಿಗೆ ನಿಲ್ಲುವುದಿಲ್ಲ. ಕಳೆದದ್ದನ್ನು ಮರೆತು, ಮನಸ್ಸನ್ನು ಹಗುರವಾಗಿಸಿಕೊಂಡು ಮಲಗುವುದು ಇಂದಿನ ತುರ್ತು ಅಗತ್ಯ. ನೆಮ್ಮದಿಯಿಂದ ನಿದ್ರಿಸಿ, ನಾಳೆ ನಿಮಗಾಗಿ ಕಾಯುತ್ತಿದೆ. ಶುಭರಾತ್ರಿ!!



