Friday, August 29, 2025

Good or Bad | ಇನ್‌ಸ್ಟಂಟ್ ಕಾಫಿ ಕುಡಿಯೋದು ಆರೋಗ್ಯಕ್ಕೆ ಒಳ್ಳೆದ? ಕೆಟ್ಟದ್ದ?

ಇಂದಿನ ವೇಗದ ಜೀವನಶೈಲಿಯಲ್ಲಿ ತ್ವರಿತವಾಗಿ ತಯಾರಾಗುವ ಪಾನೀಯಗಳು ಜನಪ್ರಿಯವಾಗಿವೆ. ಅದರಲ್ಲೂ ಇನ್‌ಸ್ಟಂಟ್ ಕಾಫಿ ಜನರ ದಿನನಿತ್ಯದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ. ಬೆಳಿಗ್ಗೆಯ ಅವಸರದ ವೇಳೆಯಲ್ಲಿ ಕೇವಲ ಬಿಸಿ ನೀರು ಅಥವಾ ಹಾಲಿನೊಂದಿಗೆ ತಯಾರಿಸಬಹುದಾದ ಈ ಪಾನೀಯವು ಮನಸ್ಸಿಗೆ ಶಕ್ತಿ ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ. ತಜ್ಞರ ಪ್ರಕಾರ, ಇನ್‌ಸ್ಟಂಟ್ ಕಾಫಿ ಆ್ಯಂಟಿ ಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದ್ದು, ಟೈಪ್ 2 ಡಯಾಬಿಟಿಸ್, ಲಿವರ್ ಸಮಸ್ಯೆಗಳು ಮತ್ತು ಕೆಲವು ಕ್ಯಾನ್ಸರ್‌ಗಳನ್ನು ತಡೆಯುವಲ್ಲಿ ಸಹಾಯಕ. ಆದರೆ ಅತಿಯಾದ ಸೇವನೆಯಿಂದ ಕಾಫೀನ್ ಸಂಬಂಧಿತ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

ಇನ್‌ಸ್ಟಂಟ್ ಕಾಫಿಯ ಪ್ರಮುಖ ಲಾಭಗಳು

ಸರಳ ತಯಾರಿ: ಬಿಸಿ ನೀರು ಅಥವಾ ಹಾಲು ಸಾಕು, ಕೆಲವೇ ಕ್ಷಣಗಳಲ್ಲಿ ತಯಾರಾಗುತ್ತದೆ.

ಹೆಚ್ಚು ಕಾಲ ಬಾಳಿಕೆ: ಪೌಡರ್ ರೂಪದಲ್ಲಿ ದೀರ್ಘಕಾಲ ಶೇಖರಿಸಬಹುದಾದ್ದರಿಂದ ಅನುಕೂಲಕರ.

ಕಡಿಮೆ ಕಾಫೀನ್: ಸಾಮಾನ್ಯ ಕಾಫಿಗೆ ಹೋಲಿಸಿದರೆ ಕಡಿಮೆ ಕಾಫೀನ್ ಹೊಂದಿರುವುದರಿಂದ ಆ್ಯಸಿಡಿಟಿ ಕಡಿಮೆ.

ಮೂಡ್ ಬೂಸ್ಟರ್: ಮೆದುಳಿನ ಕಾರ್ಯತಂತ್ರವನ್ನು ಪ್ರೇರೇಪಿಸಿ ಮನಸ್ಸನ್ನು ಚುರುಕುಗೊಳಿಸುತ್ತದೆ.

ಡಯಾಬಿಟಿಸ್ ಅಪಾಯ ಕಡಿಮೆ: ನಿಯಮಿತವಾಗಿ ಸೇವಿಸಿದರೆ ಟೈಪ್ 2 ಡಯಾಬಿಟಿಸ್ ಅಪಾಯ ಶೇಕಡಾ 11 ರಷ್ಟು ಕಡಿಮೆಯಾಗಬಹುದು.

ಇನ್‌ಸ್ಟಂಟ್ ಕಾಫಿ ಸುಲಭವಾಗಿ ಲಭ್ಯವಾಗುವ ಪಾನೀಯವಾಗಿದ್ದು, ಅದರಲ್ಲಿನ ಪೋಷಕಾಂಶಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೆರವಾಗುತ್ತವೆ. ಆದರೆ ಮಿತವಾಗಿ ಸೇವಿಸುವುದು ಮುಖ್ಯ. ದಿನಕ್ಕೆ ಒಂದು ಅಥವಾ ಎರಡು ಕಪ್‌ಗಳಷ್ಟೇ ಕುಡಿಯುವುದರಿಂದ ಲಾಭ ಹೆಚ್ಚಾಗಿ ದೊರೆಯುತ್ತದೆ. ಅತಿಯಾದ ಸೇವನೆಯಿಂದ ನಿದ್ರಾಹೀನತೆ, ಆ್ಯಂಕ್ಸೈಟಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಇದನ್ನೂ ಓದಿ