February 4, 2026
Wednesday, February 4, 2026
spot_img

ಟ್ರಾಫಿಕ್ ಕಷ್ಟಕ್ಕೆ ‘ಗುಡ್ ಬೈ’: ಹಳಿ ಮೇಲೆ ಓಡಲು ಸಜ್ಜಾದ ಪಿಂಕ್ ಲೈನ್ ಮೆಟ್ರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಚುರುಕುಗೊಂಡಿದ್ದು, ಈ ಮಾರ್ಗಕ್ಕಾಗಿ ಉದ್ದೇಶಿಸಲಾದ ಎರಡನೇ ರೈಲು ಯಶಸ್ವಿಯಾಗಿ ಬೆಂಗಳೂರು ತಲುಪಿದೆ. ಪ್ರಸ್ತುತ ಈ ರೈಲಿನ ಬೋಗಿಗಳನ್ನು ಕೊತ್ತನೂರು ಡಿಪೋದಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಶೀಘ್ರದಲ್ಲೇ ಜೋಡಣೆ ಕಾರ್ಯ ನಡೆಯಲಿದೆ.

ಒಟ್ಟು 21.26 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಮೊದಲು ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ (7.5 ಕಿ.ಮೀ ಎಲಿವೇಟೆಡ್ ವಿಭಾಗ) ಮೆಟ್ರೋ ಸಂಚಾರ ಆರಂಭವಾಗಲಿದೆ. ಮೂಲಗಳ ಪ್ರಕಾರ, ಬರುವ ಏಪ್ರಿಲ್ ತಿಂಗಳಿನಲ್ಲಿ ಈ ಭಾಗ ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ. ಇದು ದಕ್ಷಿಣ ಬೆಂಗಳೂರಿನ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸಹಕಾರಿಯಾಗಲಿದೆ.

ಇದನ್ನೂ ಓದಿ:

7.5 ಕಿ.ಮೀ ಉದ್ದದ ಈ ಹಂತದಲ್ಲಿ ಒಟ್ಟು 6 ನಿಲ್ದಾಣಗಳಿದ್ದು, ಸುರಕ್ಷತಾ ಪರೀಕ್ಷೆಗಳು ಭರದಿಂದ ಸಾಗಿವೆ. ಇನ್ನುಳಿದ 13.76 ಕಿ.ಮೀ ಸುರಂಗ ಮಾರ್ಗದ ಕೆಲಸಗಳು ಪ್ರಗತಿಯಲ್ಲಿದ್ದು, ವರ್ಷಾಂತ್ಯಕ್ಕೆ ಇಡೀ ಪಿಂಕ್ ಲೈನ್ ಲೋಕಾರ್ಪಣೆಯಾಗುವ ಗುರಿ ಹೊಂದಲಾಗಿದೆ.

ಹೊಸ ರೈಲುಗಳ ಜೋಡಣೆಯಾದ ಬೆನ್ನಲ್ಲೇ ಟ್ರ್ಯಾಕ್ ಪರೀಕ್ಷೆ ಮತ್ತು ತಾಂತ್ರಿಕ ಗುಣಮಟ್ಟದ ಆಡಿಟ್ ನಡೆಯಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !