February 7, 2026
Saturday, February 7, 2026
spot_img

ತುಂಗಭದ್ರಾ ಜಲಾಶಯದ ಗೇಟಗಳ ದುರಸ್ತಿಗೆ ಸರ್ಕಾರ ಬದ್ದ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್ ಗೇಟಗಳನ್ನು ಬರುವ ಮುಂಗಾರು ಮಳೆ ಆರಂಭಕ್ಕೂ ಪೂರ್ವದಲ್ಲಿ ಅಳವಡಿಸುವುದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ನಗರದಲ್ಲಿ ಆಯೋಜಿಸಿರುವ ಜಿಲ್ಲಾ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಜಲಾಶಯದ ಒಂದು ಗೇಟ್ ಒಡೆದ ಸಂದರ್ಭದಲ್ಲಿ ಅನೇಕ ಟೀಕೆಗಳು ಬಂದವು. ಆದರೆ ನಮ್ಮ ಸರ್ಕಾರ ನೂತನ ಗೇಟ್ ಗಳನ್ನು (ಮಾರ್ಚ್ ಅಂತಗಯದಲ್ಲಿ) ಅಳವಡಿಸಲಾಗುವುದು ಎಂದು ಹೇಳಿದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ತುಂಗಭದ್ರಾ ಜಲಾಶಯದ ೩೦ ಟಿಎಂಸಿ ನೀರು ಬಳಸದೇ ಇರುವುಸರಿಂದ ಸಮುದ್ರ ಸೇರುತ್ತಿದೆ. ಈ ನೀರಿನ ಬಳಕೆಗೆ ಇಲ್ಲಿನ ಮುಖಂಡರು ಮತ್ತು ರೈತರು ಆಗ್ರಹಿಸುತ್ತಲೇ ಇರುವರು. ಇದರ ಬಳಕೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಈ ಕುರಿತು ಆಂದ್ರ ಪ್ರದೇಶದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಅವರ ಸಮಯವನ್ನು ಕೇಳುತ್ತಲೇ ಇದ್ದೇವೆ ಆದರೆ ಆಂದ್ರದ ಮುಖ್ಯಮಂತ್ರಿಗಳು ಸಮಯವನ್ನು ನೀಡುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಇಲ್ಲಿನ ಕಾಲುವೆಯ ಟೇಲ್ ಎಂಡ್ ವರೆಗೂ ನೀರೊದಗಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಯಚೂರಿ ಜಿಲ್ಲೆ ಐತಿಹಾಸಿಕ ಪರಂಪರೆಯ ನೆಲೆ ಬೀಡು. ಇದೊಂದು ಪರಂಪರೆ ಬೇರು, ಕಲೆ, ಸಂಸ್ಕೃತಿಯ ಸಂಗಮವೇ ಈ ರಾಯಚೂರು ಇತ್ಸವವಾಗಿದೆ. ಶರಣರು, ದಾಸರ ನೆಲೆಬೀಡು, ಎಡೆದೊರೆ ನಾಡಿನಿಂದ ಉತ್ತಮ ಸೋನಾ ಮಸೂರಿ ಅಕ್ಕಿ, ಚಿನ್ನ, ಹತ್ತಿ ಬೆಳೆಯುವ ನಾಡಿದು ಎಂದು ಹೇಳಿದರು.

ನಗುವುದು ಸಹಜ ಧರ್ಮ, ನಗಿಸುವುದು ಪರರ ಧರ್ಮ ಎಂದು ಡಿವಿಜಿ ಅವರ ಮಾತನ್ನು ನೆನೆದು. ಜಾನಪದವೇ ನಮ್ಮ ಸಾಹಿತಗಯದ ಮೂಲ, ಕಲೆ, ಸಂಸ್ಕೃತಿಯೇ ನಮ್ಮ ಶಕ್ತಿ. ಕಲೆಗಳು ಬೇರೆಬೇರೆ ಇರಬಹುದು ಆದರೆ ಕಾಲವಿದರು ಮಾತ್ರ ಒಂದೇ ಎಂದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಗಡಿನಾಡುಗಳಲ್ಲಿ ಕನ್ನಡ ಉಳಿವಿಗಾಗಿ, ಇಲ್ಲಿನ ಕಲೆ, ಸಂಸ್ಕೃತಿ ಉಳಿವಿಗಾಗಿ ಕನ್ನಡ ಉತ್ಸವಗಳು ಜರುಗಲೇ ಬೇಕು. ತಹ ಉತ್ಸವಗಳ ಮೂಲಕ ಕಲೆ, ಸಂಸ್ಕತಿ, ಸಾಹಿತ್ಯ, ಚಿತ್ರಕಲೆ ತಿಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಇಲ್ಲದ್ದರಿಂದ ಇಲ್ಲಿನ ರೈತರು ಎರಡನೇ ಬೆಳೆ ಹಾಕದೇ ತ್ಯಾಗ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಎಡದಂಡೆ ಕಾಲುವೆಗಳನ್ನು ದುರಸ್ತಿ ಮಾಡಿ ಯೋಜನೆಯ ಕೊನೆಯ ರಯತರ ಹೊಲಗಳಿಗೆ ನೀರೊದಗಿಸುವುದಕ್ಕೆ ಕಾಲುವೆಗಳ ದುರಸ್ತಿ ಕಾರ್ಯಕ್ಕೆ ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಿಕೆಶಿ ಅವರನ್ನು ರೈತರ ಪರವಾಗಿ ವಿನಂತಿಸಿಕೊಂಡರು.

ವೇದಿಕೆಯಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ, ಎನ್.ಎಸ್.ಭೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಶರಣಬಸಪ್ಪ ದರ್ಶನಾಪೂರ, ಬಸನಗೌಡ ದದ್ದಲ, ಬಸನಗೌಡ ತುರ್ವಿಹಾಳ, ಜಿ.ಟಿ.ಪಾಟೀಲ, ಎ.ವಸಂತಕುಮಾರ, ಬಸನಗೌಡ ಬಾದರ್ಲಿ ಸೇರಿದಂತೆ ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !