ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರದ ವಿಭಾಗೀಯ ಆಯುಕ್ತರ ಕಚೇರಿ ಸಾರ್ವಜನಿಕರ ಗಮನ ಸೆಳೆದಿದೆ. ಆದಾಯ ಹೆಚ್ಚುವರಿ ಆಯುಕ್ತ ರಾಜೇಶ್ ಖವಾಲೆ ಅವರ ಕಚೇರಿ ಹೊರಭಾಗದಲ್ಲಿ ಅಸಾಮಾನ್ಯ ನಾಮಫಲಕವೊಂದು ಕಾಣಿಸಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ. ʼನನ್ನ ಸಂಬಳದಿಂದ ತೃಪ್ತನಾಗಿದ್ದೇನೆʼ ಎಂಬ ಫಲಕ ಹಾಕಿದ್ದಾರೆ.
ಈ ಸಂದೇಶವು ಸರ್ಕಾರಿ ಅಧಿಕಾರಿಗಳು ದೈನಂದಿನ ಕೆಲಸ ನಿರ್ವಹಿಸುವಾಗ ಎದುರಿಸುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ತಿಳಿಸಿದ್ದಾರೆ. ಹಲವಾರು ಜನರು ಕಡತಗಳು ಬೇಗನೆ ಕ್ಲಿಯರ್ ಆಗುವಂತೆ ಲಂಚ ನೀಡಲು ಯತ್ನಿಸುತ್ತಾರೆ. ಇನ್ನೂ ಕೆಲವರು ಒತ್ತಡ ತಂತ್ರಗಳ ಮೂಲಕ ನಿರ್ಧಾರಗಳನ್ನು ಪ್ರಭಾವಿತಗೊಳಿಸಲು ಪ್ರಯತ್ನಿಸುತ್ತಾರೆ. ತಮ್ಮ ವೇತನವೇ ಸಮೃದ್ಧಿ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ, ಖವಾಲೆ ಅವರು ನಿಷ್ಠೆ ಮತ್ತು ಪಕ್ಷಪಾತವಿಲ್ಲದ ಸಾರ್ವಜನಿಕ ಸೇವೆಗೆ ಬದ್ಧತೆಯನ್ನು ಒತ್ತಿ ಹೇಳುತ್ತಿರುವಂತೆ ಕಾಣುತ್ತದೆ.

