Friday, August 29, 2025

ಸರಕಾರದಿಂದ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಜಾಗವನ್ನು ಸಂಪೂರ್ಣವಾಗಿ ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇದೀಗ ಇದೇ ಜಾಗದಲ್ಲಿ ನಟ ವಿಷ್ಣು ವರ್ಧನ್ ಸಮಾಧಿ ಸ್ಥಳ ಕೂಡ ಇತ್ತು. .

ಜಾಗ ಮುಟ್ಟುಗೋಲು ಹಾಕಿಕೊಂಡಿರೋದಕ್ಕೆ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಭಿಮಾನ್ ಸ್ಟುಡಿಯೋ ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ಪ್ರಯತ್ನ ಪಟ್ಟಿದ್ವಿ, ಆದರೆ ಆಗಿರಲಿಲ್ಲ. ಈಗ ನಮಗೆ ತುಂಬಾ ಖುಷಿಯಾಗಿದೆ. ಅಪ್ಪಾಜಿ ಅಂತ್ಯ ಸಂಸ್ಕಾರದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕ ಕಟ್ಟಿದ್ದರು. ಆದರೆ ವಿರೋಧಿಗಳು ನೆಲಸಮ ಮಾಡಿಬಿಟ್ಟರು.

ಮುಟ್ಟುಗೋಲು ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ, ಈಗ ಬಂದಿದೆ. ಕೇವಲ 10 ಗುಂಟೆ ಜಾಗ ಕೇಳ್ತೀವಿ. ನಿನ್ನೆಯ ದಿನ ಸಿಎಂ ಭೇಟಿಯಾದಾಗ ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ನಾನು ಏನು ಹೇಳ್ತಿದ್ದಿನೋ, ಅದನ್ನೇ ಅಮ್ಮ ಹೇಳ್ತಿರೋದು. ಸಿಎಂ ಕಳೆದ ಬಾರಿ ಹೋದಾಗಲೂ ‘ಕರ್ನಾಟಕ ರತ್ನ’ ಬಗ್ಗೆ ಭರವಸೆ ಕೊಟ್ಟಿದ್ದರು. ಈ ಬಾರಿಯೂ ಭರವಸೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಇರುವ ಅಭಿಮಾನಿಗಳು ಅಭಿಮಾನಿಗಳಲ್ಲ. ನಿಜವಾದ ಅಭಿಮಾನಿಗಳು ಸದಾ ನಮ್ಮ ಜೊತೆ ಇರೋರು ಎಂದರು.

ನಿಯಯ, ಷರತ್ತಿನ ಉಲಂಘನೆಯ ಕಾರಣದಿಂದ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ