ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ತನ್ನ 550ನೇ ವರ್ಷಾಚರಣೆಯ (ಸಾರ್ಧ ಪಂಚ ಶತಮಾನೋತ್ಸವ) ನಿಮಿತ್ತ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 77 ಅಡಿ ಎತ್ತರದ ಶ್ರೀರಾಮ ದೇವರ ಕಂಚಿನ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದರು.


ಗಣ್ಯರ ಉಪಸ್ಥಿತಿ
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಸ್ವಾಮೀಜಿಯವರು ಪ್ರಮುಖವಾಗಿ ಉಪಸ್ಥಿತರಿದ್ದರು. ಇದರೊಂದಿಗೆ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಗೋವಾ ರಾಜ್ಯಪಾಲ ಪಿ. ಅಶೋಕ ಗಜಪತಿ ರಾಜು, ಕೇಂದ್ರ ಸಚಿವ ಶ್ರೀಪಾದ ನಾಯ್ಕ ಮತ್ತು ಪರ್ತಗಾಳಿ ಕೇಂದ್ರ ಮಠ ಕಮಿಟಿ ಅಧ್ಯಕ್ಷ ಶ್ರೀನಿವಾಸ ಧೆಂಪೋ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪ್ರಧಾನಿಯವರಿಂದ ಮಠ ದರ್ಶನ ಮತ್ತು ಮೆಚ್ಚುಗೆ
ಪ್ರತಿಮೆ ಅನಾವರಣದ ನಂತರ, ಪ್ರಧಾನಿ ಮೋದಿ ಅವರು ಮಠಕ್ಕೆ ಭೇಟಿ ನೀಡಿ, ಮಠದ ದೇವರ ದರ್ಶನ ಪಡೆದರು. ಮಠದ ಆಕರ್ಷಕ ಶಿಲ್ಪಕಲೆಯನ್ನು ಕೂಲಂಕಷವಾಗಿ ವೀಕ್ಷಿಸಿದ ಅವರು, ಶ್ರೀಗಳಿಂದ ಅದರ ಕುರಿತು ವಿವರವಾದ ಮಾಹಿತಿಯನ್ನು ಪಡೆದರು ಹಾಗೂ ಮಠದ ವಾಸ್ತುಶಿಲ್ಪ ಮತ್ತು ಕಲಾತ್ಮಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

