March 25, 2026
Wednesday, March 25, 2026
spot_img

VIRAL | ಮಿಸ್‌ ಆಗಿ ಬಣ್ಣ ಎರಚಿದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳಿಗೆ ಬಣ್ಣದ ಹಬ್ಬ ಅಂದ್ರೆ ಇಷ್ಟ, ಅದರಲ್ಲಿಯೂ ಬೇಡ ಬೇಡ ಅಂದೋರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಚ್ಚೋದು ಅಂದ್ರೆ ಇನ್ನೂ ಇಷ್ಟ. ಗೊತ್ತಿಲ್ಲದೇ ಬಣ್ಣ ಎರಚಿದ ಮೊಮ್ಮಗನ ಮೇಲೆ ಅಜ್ಜಿ ಕುದಿಯುವ ನೀರನ್ನು ಸುರಿದಿದ್ದಾರೆ.

ನಾಗ್ಪುರ ಜಿಲ್ಲೆಯ ಕೋರಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಓಂ ಹರೀಶ್‌ ವಂಗೆ ಎನ್ನುವ ಬಾಲಕ ಮನೆಯ ಮುಂದೆ ಸ್ಪ್ರೇ ಬಾಟಲಿಯಲ್ಲಿ ಆಟ ಆಡುತ್ತಿದ್ದ. ಈ ವೇಳೆ ಮಿಸ್‌ ಆಗಿ ಅಜ್ಜಿ ಸಿಂಧು ಠಾಕ್ರೆ ಮೇಲೆ ಬಣ್ಣ ಬಿದ್ದಿದೆ. ಆಗ ಅಜ್ಜಿ ಕೈಯಲ್ಲಿ ಕುದಿಯುವ ನೀರಿನ ಬಕೆಟ್‌ ಇತ್ತು. ಅಜ್ಜಿ ಸಿಟ್ಟಿನಲ್ಲಿ ನಾಲ್ಕು ವರ್ಷದ ಮಗು ಎನ್ನುವುದನ್ನೂ ನೋಡದೇ ಕುದಿಯುವ ನೀರನ್ನು ಸುರಿದಿದ್ದಾರೆ.

ನಾಲ್ಕು ವರ್ಷದ ಎಳೆ ಚರ್ಮವಿರುವ ಬಾಲಕ ಒದ್ದಾಡಿ ಕಿರುಚಾಡಿ ಕಣ್ಣೀರಿಟ್ಟಿದ್ದಾನೆ. ಸಿಸಿಟಿವಿಯಲ್ಲಿ ಈ ದೃಶ್ಯ ಕಾಣಸಿಕ್ಕಿದೆ. ಮೊಮ್ಮಕ್ಕಳನ್ನು ನೋಡೋಕೆ ಸಿಗದೇ ಎಷ್ಟೋ ಮಂದಿ ಕಣ್ಣೀರಿಡುತ್ತಿದ್ದಾರೆ. ಆದರೆ ಇರುವ ಮೊಮ್ಮಗನನ್ನು ಇಷ್ಟು ಕ್ರೂರವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಬೈಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !