ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತುಹಾಕಲಾಗಿದೆ ಎಂಬ ದೂರಿಗೆ ಸಂಬಂಧಿಸಿ ಮುಂದುವರಿದಿರುವ ಸಮಾಧಿ ಶೋಧದ ಮಂಗಳವಾರದ ತನಿಖೆ ಪೂರ್ಣಗೊಂಡಿದೆ.
ಸಾಕ್ಷಿ ದೂರುದಾರ ಗುರುತಿಸಿರುವ ಪಾಯಿಂಟ್ 11 ಹಾಗೂ ಪಾಯಿಂಟ್ 12ರಲ್ಲಿ ಮಂಗಳವಾರ ಮಳೆಯ ನಡುವೆಯೂ ಸಮಾಧಿ ಶೋಧ ನಡೆದಿದೆ. ಪಾಯಿಂಟ್ 11ರಲ್ಲಿ ಬೆಳಿಗ್ಗೆ 11.30ಕ್ಕೆ ಆರಂಭವಾದ ತನಿಖೆ ಮಧ್ಯಾಹ್ನ 1.55ರ ಸುಮಾರಿಗೆ ಪೂರ್ಣಗೊಂಡಿತು. ಬಳಿಕ ಪಾಯಿಂಟ್ 12ರಲ್ಲಿ ಶೋಧ ಕಾರ್ಯ ನಡೆದಿದೆ. ಈ ಎರಡೂ ಸ್ಥಳಗಳು ನೇತ್ರಾವತಿ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಅಡಿ ದೂರದಲ್ಲಿವೆ. ಈ ಎರಡೂ ಸ್ಥಳಗಳ ಶೋಧ ಕಾರ್ಯ ಸಂಜೆಯ ವೇಳೆಗೆ ಪೂರ್ಣಗೊಂಡಿದ್ದು, ಯಾವುದೇ ಕುರುಹುಗಳು ಪತ್ತೆಯಾಗದಿರುವ ಹಿನ್ನಲೆಯಲ್ಲಿ ಈ ಸ್ಥಳಗಳನ್ನು ಮುಚ್ಚಿ ಸೀಲ್ ಮಾಡಲಾಗಿದೆ.
ದಿನಪೂರ್ತಿ ನಡೆದ ಸಮಾಧಿ ಶೋಧ ಸಂದರ್ಭ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಾಯಿಂಟ್ 11ರಲ್ಲಿನ ಶೋಧ ಕಾರ್ಯಕ್ಕೆ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗಿದ್ದರೆ, ಪಾಯಿಂಟ್ 12ರಲ್ಲಿ ಮಿನಿ ಹಿಟಾಚಿಯ ನೆರವು ಪಡೆಯಲಾಗಿತ್ತು.