Sunday, January 11, 2026

ಅವರೆಕಾಳಿಗೆ ಹಸಿಮೆಣಸಿನ ಖಾರ ಬಿದ್ರೆ ರುಚೀನೇ ಬೇರೆ, ರೆಸಿಪಿ ಇಲ್ಲಿದೆ

ಹೇಗೆ ಮಾಡೋದು?

ಮೊದಲು ಅವರೆಕಾಳನ್ನು ಬಿಡಿಸಿ ಇಟ್ಟುಕೊಳ್ಳಿ, ಸಿಪ್ಪೆ ತೆಗೆದು ಮಾಡಿದರೆ ರುಚಿ ಹೆಚ್ಚು
ಬಾಣಲೆಗೆ ಎಣ್ಣೆ ಈರುಳ್ಳಿ, ಚಕ್ಕೆ,ಲವಂಗ, ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ,ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಕಾಯಿತುರಿ ಹಾಕಿ, ಆಮೇಲೆ ಸ್ವಲ್ಪ ಸಾಂಬಾರ್‌ ಪುಡಿ ( ಕೊತ್ತಂಬರಿ ಕಾಳಿನ ಪುಡಿ) ಹಾಕಿ
ನಂತರ ಈ ಮಸಾಲಾ ರುಬ್ಬಿ ಇಟ್ಟುಕೊಳ್ಳಿ

ಆಮೇಲೆ ಪಾತ್ರೆಗೆ ಎಣ್ಣೆ ಪಲಾವ್‌ ಎಲೆ, ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅವರೆಕಾಳು ಹಾಗೂ ಆಲೂಗಡ್ಡೆ ಹಾಕಿ ಬಾಡಿಸಿ
ನಂತರ ಮಸಾಲಾ ಹಾಕಿ, ಮಿಕ್ಸ್‌ ಮಾಡಿ, ಉಪ್ಪು ಹಾಕಿ ಕುದಿಸಿದ್ರೆ ಸಾರು ರೆಡಿ

error: Content is protected !!