Sunday, December 21, 2025

ಗ್ರೆನೇಡ್ ದಾಳಿ ಕೇಸ್​: ಪಾಕ್ ಬೆಂಬಲಿತ ಉಗ್ರ ಮಾಡ್ಯೂಲ್​ ಭೇದಿಸಿದ ದೆಹಲಿ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಗುರುದಾಸಪುರದ ನಗರ ಪೊಲೀಸ್ ಠಾಣೆಯ ಹೊರಗೆ ನಡೆದ ಗ್ರೆನೇಡ್ ದಾಳಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಬಂಧಿಸಿದೆ.

ಈ ಗುಂಪು ಪಾಕಿಸ್ತಾನದ ಉಗ್ರ ಶಹಜಾದ್ ಭಟ್ಟಿ ನೇತೃತ್ವದ ಭಯೋತ್ಪಾದಕ ಮಾಡ್ಯೂಲ್​ ಆಗಿತ್ತು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಬಂಧಿತರನ್ನು ಮಧ್ಯಪ್ರದೇಶದ ದಾಟಿಯಾ ನಿವಾಸಿ ವಿಕಾಸ್ ಪ್ರಜಾಪತಿ ಅಲಿಯಾಸ್ ಬೇತು (19), ಪಂಜಾಬ್‌ನ ಫಿರೋಜ್‌ಪುರದ ಹರ್ಗುಣ್‌ಪ್ರೀತ್ ಸಿಂಗ್ ಅಲಿಯಾಸ್ ಗುರ್ಕರನ್‌ಪ್ರೀತ್ ಸಿಂಗ್ (19) ಮತ್ತು ಉತ್ತರ ಪ್ರದೇಶದ ಬಿಜ್ನೌರ್‌ನ ಆಸಿಫ್ ಅಲಿಯಾಸ್ ಅರಿಶ್ (22) ಎಂದು ಗುರುತಿಸಲಾಗಿದೆ.

ಬಂಧಿತರ ಬಳಿ ಸ್ವಯಂಚಾಲಿತ ಪಿಸ್ತೂಲ್, 10 ಜೀವಂತ ಗುಂಡುಗಳು ಮತ್ತು ಅಪರಾಧಕ್ಕೆ ಬಳಸಿದ ಸಂದೇಶಗಳು, ವಿಡಿಯೋಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಶೇಷ ದಳದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾ ಅವರು ತಿಳಿಸಿದರು.

error: Content is protected !!