ನೆಲ್ಲಿಕಾಯಿ ಆರೋಗ್ಯಕ್ಕೆ ಅಮೂಲ್ಯವಾದ ಹಣ್ಣು. ಇದರಲ್ಲಿರುವ ವಿಟಮಿನ್ C, ಔಷಧೀಯ ಗುಣಗಳು ದೇಹವನ್ನು ಸದೃಢವಾಗಿರಿಸುತ್ತವೆ. ಮಾರುಕಟ್ಟೆಯಿಂದ ತರುವ ಬದಲು, ಮನೆಯ ಆವರಣದಲ್ಲೇ ಒಂದು ನೆಲ್ಲಿ ಗಿಡ ಬೆಳೆಸಿಕೊಳ್ಳುವುದು ತುಂಬಾ ಸವಾಲಿನ ವಿಷಯವೂ ಹೌದು. ಸರಿಯಾಗಿ ಬೀಜ ಆಯ್ಕೆ ಮಾಡಿದರೆ, ಉತ್ತಮ ಮಣ್ಣು ಹಾಗೂ ಆರೈಕೆ ನೀಡಿದರೆ, ನೀವು ಕೂಡ ಮನೆಯಲ್ಲೇ ಸುಲಭವಾಗಿ ಆರೋಗ್ಯಕರ ನೆಲ್ಲಿಕಾಯಿ ಗಿಡ ಬೆಳೆಸಬಹುದು. ಇದಕ್ಕಾಗಿ ಹೆಚ್ಚಿನ ಖರ್ಚೂ ಬೇಡ, ಕೇವಲ ಸ್ವಲ್ಪ ಸಹನೆ ಸಾಕು.
- ಬೀಜ ಆಯ್ಕೆ ಮತ್ತು ತಯಾರಿ: ಪೂರ್ಣವಾಗಿ ಬಲಿತ, ದೊಡ್ಡ ನೆಲ್ಲಿಕಾಯಿಯನ್ನು ಒಂದು ದಿನ ಸೂರ್ಯನ ಶಾಖದಲ್ಲಿ ಇಡಬೇಕು. ನಂತರ ಮೇಲಿನ ಭಾಗವನ್ನು ತೆಗೆದು, ಒಳಗಿನ ಬೀಜವನ್ನು ಹೊರತೆಗೆಯಿರಿ. ಈ ಬೀಜವನ್ನು 24 ಗಂಟೆ ನೀರಲ್ಲಿ ನೆನೆಸಿಡಿ. ಮರುದಿನ ನೀರಿನಲ್ಲಿ ತೇಲುವ ಬೀಜಗಳನ್ನು ಬಿಟ್ಟು, ಕೆಳಗೆ ಉಳಿದ ಬೀಜಗಳನ್ನು ಮಾತ್ರ ನೆಡಲು ಬಳಸಬೇಕು.
- ಮಣ್ಣಿನ ಸಿದ್ಧತೆ ಮತ್ತು ಬೀಜ ನೆಡುವ ವಿಧಾನ: ಒಂದು ಪಾಟ್‌ನಲ್ಲಿ ವರ್ಮಿಕಾಂಪೋಸ್ಟ್ ಮತ್ತು ಕೊಕೊಪೀಟ್ ಮಿಶ್ರಿತ ತೇವಾಂಶ ಇರುವ ಮಣ್ಣನ್ನು ಹಾಕಿ. ಸುಮಾರು 1 ಸೆಂ.ಮೀ ಆಳಕ್ಕೆ ಬೀಜವನ್ನು ನೆಡಿ. ಪಾಟ್‌ನ ಮಣ್ಣು ಸದಾ ತೇವವಾಗಿರುವಂತೆ ನೋಡಿಕೊಳ್ಳಬೇಕು. ಈ ಪಾಟ್‌ಗೆ ಸೂರ್ಯನ ಬೆಳಕು ಹಾಗೂ ಸ್ವಲ್ಪ ನೆರಳೂ ಸಿಗುವಂತಹ ಜಾಗವನ್ನು ಆಯ್ಕೆ ಮಾಡಬೇಕು. ಬೀಜ ಮೊಳಕೆ ಬರಲು ಸಾಮಾನ್ಯವಾಗಿ 25–30 ದಿನ ಬೇಕಾಗುತ್ತದೆ.
- ಪೋಷಕಾಂಶಯುಕ್ತ ಮಣ್ಣು ಮತ್ತು ಪಾಟ್ ಆಯ್ಕೆ: ನೆಲ್ಲಿಕಾಯಿ ಗಿಡಕ್ಕೆ ಪೋಷಕಾಂಶ ತುಂಬಿರುವ, ಒಣಗಿದ, ಪುಡಿ ಮಣ್ಣು ಅತ್ಯಗತ್ಯ. ಇದಕ್ಕೆ ಗಾರ್ಡನ್ ಮಣ್ಣು, ವರ್ಮಿಕಾಂಪೋಸ್ಟ್ ಅಥವಾ ಹಸುವಿನ ಸಗಣಿ ಮತ್ತು ಮರಳನ್ನು ಸೇರಿಸಬಹುದು. ಸ್ವಲ್ಪ ಬೇವಿನ ಪುಡಿಯನ್ನು ಸೇರಿಸಿದರೆ ಬೇರುಗಳಿಗೆ ಬ್ಯಾಕ್ಟೀರಿಯಾ ಕಾಡುವುದಿಲ್ಲ.
- ಸೂರ್ಯನ ಬೆಳಕು ಮತ್ತು ಕಸಿ ವಿಧಾನ: ಎರಡು ತಿಂಗಳು ಆದ ನಂತರ ನೆಲ್ಲಿ ಗಿಡಕ್ಕೆ ಹೆಚ್ಚು ಸೂರ್ಯನ ಬೆಳಕು ಅಗತ್ಯ. ಇಡೀ ದಿನ ಬೆಳಕು ಬೀಳುವಂತೆ ಮಾಡಿದರೆ ಗಿಡ ಆರೋಗ್ಯಕರವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಬೀಜದಿಂದ ಬೆಳೆದ ಗಿಡಕ್ಕೆ ಫಲ ಬರಲು 7–8 ವರ್ಷ ಬೇಕಾಗುತ್ತದೆ. ಆದರೆ 2–3 ವರ್ಷದಲ್ಲೇ ನೆಲ್ಲಿಕಾಯಿ ಫಲ ಬೇಕೆಂದರೆ ಕಸಿ ಮಾಡಿಸಬೇಕು.
- ನೀರು ಮತ್ತು ಗೊಬ್ಬರದ ಸರಿಯಾದ ಬಳಕೆ: ನೆಲ್ಲಿ ಗಿಡಕ್ಕೆ ಕಸಿ ಮಾಡುವುದು ಸುಲಭವಲ್ಲ. ಅನುಭವ ಇಲ್ಲದವರು ತೋಟಗಾರರಿಂದ ಸಹಾಯ ಪಡೆಯುವುದು ಉತ್ತಮ. ಗಿಡದಲ್ಲಿ ಹೂವು ಬಿಟ್ಟ ಸಮಯದಲ್ಲಿ ಆರ್ಗಾನಿಕ್ ಗೊಬ್ಬರ ಹಾಕಬೇಕು. ಈ ಸಮಯದಲ್ಲಿ ನೀರನ್ನು ನಿಯಮಿತವಾಗಿ ಆದರೆ ಕಡಿಮೆ ಪ್ರಮಾಣದಲ್ಲಿ ನೀಡಬೇಕು. ಅತಿಯಾದ ನೀರು ಬೇರು ಕೊಳೆಯುವ ಸಾಧ್ಯತೆ ಇರುತ್ತದೆ.

